ಗಿಡದಲ್ಲೇ ಮೊಳಕೆಯೊಡೆದ ಹತ್ತಿ

1mnv01
Published on

ಮಾನ್ವಿ: ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಸಾವಿರಾರು ಎಕರೆ ಹೊಲದಲ್ಲಿ ಗಿಡದಲ್ಲೇ ಹತ್ತಿ ಮೊಳಕೆಯೊಡೆದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಮೂರ‌್ನಾಲ್ಕು ವರ್ಷಗಳಿಂದ ತುಂಗಭದ್ರಾ ಎಡದಂಡೆ ಕಾಲುವೆಗೆ ಸಮರ್ಪಕವಾಗಿ ನೀರು ಬಾರದಿರುವುದರಿಂದ ಭತ್ತ ಬೆಳೆಗಾರರು ಹತ್ತಿ ಹಾಗೂ ಇತರ ಮಿತ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ವರ್ಷ ಹತ್ತಿ ಬೆಳೆ ಚೆನ್ನಾಗಿ ಬಂದಿದೆ. ಆದರೆ ಕಳೆದ ಒಂದು ವಾರದಿಂದ ಆಗಾಗ ಸುರಿಯುತ್ತಿರುವ ಮಳೆಯಿಂದ ತಂಪು ಹೆಚ್ಚಾಗಿ ಹತ್ತಿ ಕಾಯಿ ಹಾಳಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಹತ್ತಿ ಬೆಳೆದಿರುವ ಜಮೀನಿನಲ್ಲಿ ನೀರು ನಿಂತಿರುವುದರಿಂದ ತಂಪು ಆವರಿಸಿ ಫಸಲು ನಾಶವಾಗುತ್ತಿದೆ. ಗಿಡದಲ್ಲಿ ಕಾಯಿ ಕೊರಕ ಹುಳಗಳ ಹಾವಳಿ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net