ಅವಶ್ಯವಿರುವೆಡೆ ಸಸಿ ನೆಟ್ಟು ಸಂರಕ್ಷಿಸಲಿ

sanmana
Published on

ರಟ್ಟಿಹಳ್ಳಿ: ಮನೆಯ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಅವಶ್ಯವಿರುವೆಡೆ ಸಸಿ ನೆಟ್ಟು ಸಂರಕ್ಷಣೆ ಮಾಡಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಶಿರಗಂಬಿ ಗ್ರಾಮದಲ್ಲಿ ಮಹಾನಂದಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶನಿವಾರ ಏರ್ಪಡಿಸಿದ್ದ ವನಮಹೋತ್ಸವ, ಪೌರ ಕಾರ್ಮಿಕರಿಗೆ ಮತ್ತು ಶಾಲೆಯ ಅಡುಗೆ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌರ ಕಾರ್ಮಿಕರ ಸೇವೆ ಅತ್ಯಂತ ಶ್ರಮದಾಯಕವಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಶಂಕರ ಬಣಕಾರ ಮಾತನಾಡಿ, ಶಿರಗಂಬಿ ಗ್ರಾಪಂ ವ್ಯಾಪ್ತಿಯಲ್ಲಿ ಸಾವಿರ ಸಸಿ ನೆಟ್ಟು ಪೋಷಿಸಲಾಗುವುದು ಎಂದರು.

ಪ್ರಾಥಮಿಕ ಶಾಲೆ ಅಡುಗೆ ಸಿಬ್ಬಂದಿ ಲಲಿತಮ್ಮ ಕ್ಯಾತನಕೇರಿ, ಶಾರದಮ್ಮ ಕಡೇಮನಿ, ಪ್ರಮೀಳವ್ವ ಗೊಂದೇರ ಹಾಗೂ ಪ್ರೌಢಶಾಲೆ ಸಿಬ್ಬಂದಿ ಗುತ್ತಯ ಯಡಚಿ, ಶಪುರಾ ಮಾಗೋಡ, ಕರಿಯವ್ವ ತಳವಾರ ಅವರನ್ನು ಸನ್ಮಾನಿಸಲಾಯಿತು.

ತಾಪಂ ಮಾಜಿ ಅಧ್ಯಕ್ಷ ಮಹೇಶ ಗುಬ್ಬಿ, ಟ್ರಸ್ಟ್ ಖಜಾಂಚಿ ಮುರಳಿ ನಿಂಗಜ್ಜೇರ, ಮಂಜುನಾಥ ಎ.ಸಿ, ಕೃಷ್ಣಪ್ಪ, ವೆಂಕಟರಾಜ ಎಂ, ಗ್ರಾಪಂ ಅಧ್ಯಕ್ಷೆ ಗೀತಾ ಉಜ್ಜನಗೌಡ ಗೌಡರ, ಉಪಾಧ್ಯಕ್ಷ ಸುದಾಂ ಮುದಣ್ಣನವರ, ಸುರೇಶಗೌಡ ಸೊರಟೂರ, ನಾಗನಗೌಡ ಕೋಣ್ತಿ, ರವಿ ಮುದ್ನಳ್ಳಿ, ನಿವೃತ್ತ ನ್ಯಾಯಾಧೀಶ ಚನ್ನಬಸಪ್ಪ ಮಾಳಗಿ, ಎಚ್.ಎಂ. ಗೌಡರ, ಕರೇಗೌಡ ಕೋಣ್ತಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net