ಜನ್ಮದಿನದಂದು ಸಸಿ ನೆಡಿ: ಡಾ. ಶ್ರೀ ಮಹಾಂತ ಸ್ವಾಮೀಜಿ

13sor2
ಸೊರಬದ ಮುರುಘಾಮಠದಲ್ಲಿ ಏರ್ಪಡಿಸಿದ್ದ ಭಾಷಣ ಹಾಗೂ ಚರ್ಚಾಸ್ಪರ್ಧೆಯನ್ನು ಡಾ. ಶ್ರೀ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ವೈ.ಜಿ ಪುಟ್ಟಸ್ವಾಮಿ, ಪ್ರಶಾಂತ್, ಎಂ.ಆರ್.ಪಾಟೀಲ್ ಇತರರಿದ್ದರು.
Published on

ಸೊರಬ: ಪರಿಸರ ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ಪರಿಸರ ಸಂರಕ್ಷಣೆಗೆ ಮುಂದಾಗದೆ ಇದ್ದಾರೆ ಮುಂದಿನ ದಿನದಲ್ಲಿ ದುರ್ದಿನಗಳು ನಮ್ಮೆಲ್ಲರನ್ನು ಬಾಧಿಸಲಿದೆ. ಅದಕ್ಕೂ ಮೊದಲು ಎಚ್ಚರ ವಹಿಸಬೇಕಿದೆ ಎಂದು ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾ ಮಠದಲ್ಲಿ ಕಾಂತಾರಯಜ್ಞ, ಭಾರತೀಯ ಸಂಪದ, ಪರಿಸರ ಜಾಗೃತಿ ಟ್ರಸ್ಟ್ ಆಶ್ರಯದಲ್ಲಿ ಅಂತರ ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರದ ಉಳಿವು ಮತ್ತು ಗಿಡಗಳ ಬೆಸುವುದು ಕುರಿತು ಶನಿವಾರ ಏರ್ಪಡಿಸಲಾದ ಭಾಷಣ ಹಾಗೂ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪರಿಸದ ಮೇಲೆ ಯಾವುದೇ ಪ್ರಾಣಿ, ಪಕ್ಷಿಗಳು ದಾಳಿ ನಡೆಸಿಲ್ಲ. ಆದರೆ ಮನುಷ್ಯ ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಪರಿಸರವನ್ನು ನಾಶ ಮಾಡುತ್ತ ಬಂದಿದ್ದಾನೆ. ಇದರಿಂದಾಗಿ ಕಾಡು ಪ್ರಾಣಿಗಳು ಊರ ಕಡೆ ಮುಖಮಾಡಿ ಭಯ ಭೀತಿಗೊಳಿಸುವ ಉದಾಹರಣೆಗಳು ನಮ್ಮ ಮುಂದೆ ಇವೆ. ಮಳೆ ಇಲ್ಲದೆ ಬರಗಾಲ ಎದುರಾಗಿ ಬೆಳೆ ಬಾರದೆ ಸಂಕಷ್ಟದಲ್ಲಿ ಸಿಲುಕಿದ್ದೇವೆ. ಮಣ್ಣು ಮತ್ತು ಮನುಷ್ಯನ ಆರೋಗ್ಯಕ್ಕೆ ಅರಣ್ಯ ಬಹಳ ಮುಖ್ಯ. ಅರಣ್ಯ ಸಂರಕ್ಷಣೆಗೆ ನಿತ್ಯ ಎಲ್ಲರು ಸಂಕಲ್ಪ ಮಾಡಬೇಕಿದೆ. ವಿದ್ಯಾರ್ಥಿಗಳು ಜನ್ಮದಿನ ಹಾಗೂ ವಿಶೇಷ ದಿನಗಳಲ್ಲಿ ಕೇಕ್ ಕತ್ತರಿಸಿ ಆಚರಣೆ ಮಾಡದೆ, ಗಿಡಗಳನ್ನು ನೆಟ್ಟು ಜನ್ಮದಿನವನ್ನು ಆಚರಿಸಿಕೊಳ್ಳುವಂತೆ ಸಲಹೆ ನೀಡಿದರು.
ಹಿರಿಯ ವಕೀಲ ವೈ.ಜಿ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಂತಾರ ಯಜ್ಞ ಮುಖ್ಯಸ್ಥ ಶ್ರೀಧರ ಸೀತಾರಾಮ ಹೆಗಡೆ, ಜೆಸಿಐ ಹಸಿರೀಕರಣ ವಿಭಾಗದ ಪೂರ್ವ ರಾಷ್ಟ್ರೀಯ ಸಂಯೋಜಕ ಪ್ರಶಾಂತ್ ದೊಡ್ಡಮನೆ, ತಾಲೂಕು ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಪ್ರಮುಖರಾದ ಎಂ.ನಾಗಪ್ಪ, ಶ್ರೀಪಾದ ಬಿಚ್ಚುಗತ್ತಿ, ಪ್ರಭಾಕರ್ ರಾಯ್ಕರ್, ಮಂಜುನಾಥ ಹೆಗಡೆ, ಅಶೋಕ ಹೆಗಡೆ, ಸುಮತಿ, ವಿವೇಕಾನಂದ ಗೌಡ, ಅನುಷಾ ಇತರರಿದ್ದರು. ಸೊರಬ, ಶಿರಸಿ, ಸಿದ್ದಾಪುರ ಹಾಗೂ ಸಾಗರದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net