ಸಸ್ಯಶಾಸ್ತ್ರ ಪಾಲಿಸಿದರೆ ಸಸ್ಯ ರಕ್ಷಣೆ ಸುಲಭ

ACF Himavati Bhat Planted Tree in jyotirvana Yallapura.
Published on

ಯಲ್ಲಾಪುರ: ಭಾರತೀಯ ಸಸ್ಯಶಾಸ್ತ್ರದಲ್ಲಿ ಉಲ್ಲೇಖಿಸಿದ ಕ್ರಮಗಳನ್ನು ಸರಿಯಾಗಿ ಅನುಸರಿಸಿದರೆ ಸಸ್ಯ ಸಂರಕ್ಷಣೆ ಸುಲಭ ಸಾಧ್ಯ ಎಂದು ಎಸಿಎಫ್ ಹಿಮವತಿ ಭಟ್ಟ ಹೇಳಿದರು.

ತಾಲೂಕಿನ ಉಮ್ಮಗಿಯ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನದಲ್ಲಿ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನಂ ವತಿಯಿಂದ ಹಮ್ಮಿಕೊಂಡಿದ್ದ ವೀಥಿ ವೃಕ್ಷ ಹಾಗೂ ಪತ್ರ, ಪುಷ್ಪ ಸಸ್ಯಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಡಾ. ಕೆ.ಸಿ. ನಾಗೇಶ ಭಟ್ಟ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಪುಷ್ಪ ಹಾಗೂ ಪತ್ರ ಸಸ್ಯಗಳನ್ನು ನೀಡಲಾಯಿತು.

ಜ್ಯೋತಿಷಾಚಾರ್ಯ ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ ಅವರು ಸಸ್ಯಗಳಿಗೂ, ಮಾನವನಿಗೂ ಇರುವ ಸಂಬಂಧಗಳ ಕುರಿತು ವಿವರಿಸಿದರು. ಶಿರಸಿಯ ಉಮಾಪತಿ ಭಟ್ಟ ಅವರು ವಿವಿಧ ಪತ್ರ ಪುಷ್ಪ ಪ್ರಬೇಧಗಳನ್ನು ಪಿಪಿಟಿ ಮೂಲಕ ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net