

ಮೈಸೂರು: ಚಾಮುಂಡಿಪುರಂನ ಅರುಣೋದಯ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಾಮುಂಡಿಪುರಂನಲ್ಲಿ ಗಿಡ ನೆಡಲಾಯಿತು
.
ಈ ಕಾರ್ಯಕ್ರಮಕ್ಕೆ ಪಾಲಿಕೆ ಮಾಜಿ ಸದಸ್ಯ ಹಾಗೂ ಅರುಣೋದಯ ಶಾಲೆ ಅಧ್ಯಕ್ಷ ಮಾ.ವಿ.ರಾಮಪ್ರಸಾದ್ ಚಾಲನೆ ನೀಡಿದರು.
ಇಂದಿನ ವಾತಾವರಣದಲ್ಲಿ ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯ. ಮನೆ ಮುಂದೊಂದು ಮರ ಊರಿಗೊಂದು ವನ ಎಂಬಂತೆ ಕ್ರಮ ವಹಿಸಬೇಕಾಗಿದೆ. ಶುದ್ಧ ಗಾಳಿ, ಉತ್ತಮ ವಾತಾವರಣ ನಿರ್ಮಾಣ ಮಾಡಿ ಕಾಪಾಡುವುದು ಕರ್ತವ್ಯ. ಮನೆ ಮುಂದೆ ಬೆಳೆದಿರುವ ಮರ ಎಲೆಗಳು ಉದುರುತ್ತವೆ ಎಂದು ನಗರ ಪ್ರದೇಶಗಳಲ್ಲಿ ಎಷ್ಟೋ ಜನ ಮರವನ್ನೇ ಕಡೆಯಲು ಒತ್ತಾಯಿಸುತ್ತಾರೆ. ಒಂದು ಮರದಿಂದ ಎಷ್ಟು ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಯಬೇಕು.
ಎಲ್ಲೆಲ್ಲಿ ಗಿಡಗಳನ್ನು ನೆಡಲು ಅವಕಾಶವಿದೆ ಎಂದು ಗುರುತಿಸಿ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯಿಂದ ಹೆಚ್ಚು ಗಿಡಗಳನ್ನು ನೆಡಬೇಕು ಎಂದು ಅವರು ತಿಳಿಸಿದರು.