ಪರಿಸರ ಜಾಗೃತಿಗಾಗಿ ಸಸ್ಯ ಸಂತೆ

23MUDALGI1
Published on

ಮೂಡಲಗಿ: ನಮ್ಮ ದುರಾಸೆಗಾಗಿ ಪರಿಸರ ಬಳಸಿಕೊಳ್ಳಬಾರದು. ಹೀಗಾಗಿ, ಪ್ರಸ್ತುತದಲ್ಲಿ ಪರಿಸರ ಸಂರಣೆ ಜಾಗೃತಿ ಮೂಡಿಸಲು ನಿಟ್ಟಿನಲ್ಲಿ ಸಸ್ಯ ಸಂತೆ ಆಯೋಜಿಸಿದೆ ಎಂದು ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಡೀನ್​ ಡಾ.ಎಂ.ಜಿ.ಕೆರುಟಗಿ ಹೇಳಿದರು.

ತಾಲೂಕಿನ ಅರಭಾವಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಹಾಗೂ ಸ್ಥಳಿಯ ತೋಟಗಾರಿಕೆ ವಿಸ್ತರಣಾ ಶಿಣ ಟಕದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಸ್ಯ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಹವಾಮಾನ ವೈಪರಿತ್ಯದಿಂದ ಅನಾಹುತ ಹೆಚ್ಚುತ್ತಿದ್ದು, ಮುಂದುವರಿದರೆ ಮಕ್ಕಳ ಬದುಕು ಕಷ್ಟಕರವಾಗಲಿದೆ. ಹೀಗಾಗಿ, ಪರಿಸರ ಸಂರಣೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಸಸ್ಯ ಸಂತೆಯಲ್ಲಿ ವಿವಿಧ ಹಣ್ಣಿನ ಬೆಳೆಗಳ ತಳಿ, ಹೂವು, ಅಲಂಕಾರಿಕ ಸಸ್ಯಗಳು, ಸಾಂಬಾರು, ಔಷಧ, ಸುಗಂಧ ದ್ರವ್ಯ ಬೆಳೆ ಸೇರಿ ಅನೇಕ ಉತ್ಪನ್ನ ಮಾರಾಟಕ್ಕೆ ಲಭ್ಯ ಇವೆ ಎಂದು ಮಾಹಿತಿ ನೀಡಿದರು.

ಮುಖ್ಯಶಿಕಿ ಸುಚೇತಾ ಪೂಜಾರಿ, ಡಾ.ಎ.ಎಂ.ನಧಾಪ್​, ಡಾ.ಸಚಿನಕುಮಾರ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net