ದೇವಸ್ಥಾನದಲ್ಲಿ ಪ್ರಸಾದವಾಗಿ ಗಿಡ ವಿತರಣೆ!

Plant-distribution
Published on

ಕಾರವಾರ: ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ವಿತರಣೆ ಮಾಡುವುದು ಸಾಮಾನ್ಯ, ಅಂಕೋಲಾ ತಾಲೂಕಿನ ದೇವಸ್ಥಾನವೊಂದರ ಪ್ರತಿಷ್ಠಾಪನೆಗೆ ಪ್ರಸಾದವಾಗಿ ಗಿಡಗಳನ್ನು ನೀಡಿ ದೇವಸ್ಥಾನದ ಆಡಳಿತ ಮಂಡಳಿ ಮಾದರಿಯಾಗಿದೆ.
ಅಂಕೋಲಾ ಗಂಗಾವಳಿ ದಂಡೆಯ ಮೇಲಿರುವ ಬಿಳಿಹೊಯ್ಗಿ ಗ್ರಾಮದ ಜೈನ ಜಟಕ, ಮಹಾದೇವಿ, ನಾಗದೇವತೆ ದೇವಸ್ಥಾನದ ಜೀರ್ಣೋದ್ಧಾರ ನಡೆದಿದ್ದು, ಜೂ.5 ರಿಂದ ಸೋಮವಾರದವರೆಗೆ ದೇವರ ಪುನರ್ ಪ್ರಿಷ್ಠಾಪನಾ ಕಾರ್ಯಗಳು ಜೈನ ಸಂಪ್ರದಾಯದಂತೆ ಜರುಗಿದವು.
ಜೂ.5 ರಂದು ಗಿಡ ನೆಟ್ಟು ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು. 6 ರಂದು ಕಂಕಣ ಬಂಧನ, ಧ್ವಜಾರೋಹಣ, ಗೋಪೂಜೆ, ಅಖಂಡ ದೀಪ ಸ್ಥಾಪನಾ ಕಾರ್ಯಗಳು ಜರುಗಿದವು. ಜೂ.7 ರಂದು ವಜ್ರ ಪಂಜರ ಆರಾಧನೆ, ನಾಗಾರ್ಜುನ ಯಂತ್ರಾರಾಧನೆ, ಸರ್ವದೋಷ ಪ್ರಾಯಶ್ಚಿತ್ತ ಆರಾಧನೆ, ಕ್ಷೇತ್ರಪಾಲ ಆರಾಧನೆ ನಡೆಯಿತು. ಜೂ.8 ರಂದು ಬ್ರಹ್ಮ ಕಲಶ ಮೆರವಣಿಗೆ, ಪೀಠಶುದ್ಧಿ ಹವನ, ಬಲಿ ಪೂಜೆ, ಜೂ.9 ರಂದು ದೇವರ ಪ್ರತಿಷ್ಠಾಪನೆ. ಕಲಾವೃದ್ಧಿ ಜಬ, ಅಷ್ಟಬಂಧ ಕಾರ್ಯಗಳು ಜರುಗಿದವು. ಜೂ.10 ರಂದು ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ನವಚಂಡಿ ಹವನ, ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ನಡೆಯಿತು.ಆಗಮಿಸಿದ ಎಲ್ಲ ಭಕ್ತರಿಗೆ, ಪೂಜೆ ಮಾಡಿದ ಪುರೋಹಿತರಿಗೆ ನೆಲ್ಲಿ, ಸಂಪಿಗೆ ಮುರುಗಲು, ನೇರಳೆ ಹೀಗೆ ವಿವಿಧ ಜಾತಿಯ 800 ಗಿಡಗಳನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ಪ್ರಸಾದ ರೂಪವಾಗಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net