ಬೆಳ್ತಂಗಡಿ: ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ತೋಟಗಾರಿಕೆ ಬೆಳೆಗಳಲ್ಲಿ ಸಸ್ಯಾಭಿವೃದ್ಧಿ(ಕಸಿ ಕಟ್ಟುವ ವಿಧಾನ/ನರ್ಸರಿ ಟೆಕ್ನಿಕ್ಸ್) ವಿಷಯದ ಬಗ್ಗೆ ಆ.16 ಹಾಗೂ 17ರಂದು ಬೆಳಗ್ಗೆ 10 ಗಂಟೆಯಿಂದ ಎರಡು ದಿನಗಳ ಸಾಂಸ್ಥಿಕ ತರಬೇತಿ ನಡೆಯಲಿದೆ. ನಿವೃತ್ತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಜೀವ ನಾಯ್ಕ, ಪ್ರಗತಿಪರ ರೈತ ಪ್ರಭಾಕರ ಮಯ್ಯ ಸುರ್ಯ,ಪುತ್ತೂರು ನರ್ಸರಿಯ ನವನೀತ ಭಾಗವಹಿಸಲಿದ್ದಾರೆ. ಭಾಗವಹಿಸುವ ರೈತರು ಕಡ್ಡಾಯವಾಗಿ ಎಫ್‌ಐಡಿ ಅಥವಾ ಚುನಾವಣಾ ಗುರುತಿನ ಚೀಟಿ ತರುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.