

ಸಂಡೂರು: ಶಾಲೆ ಪರಿಸರದ ಬಗ್ಗೆ ಮಕ್ಕಳಿಗೆ ಅರಿವು ಇರಬೇಕು. ಎಲ್ಲಿ ಗಿಡ ಹಾಕಿದರೆ ಉಪಯೋಗ ಮತ್ತು ಎಲ್ಲಿ ಹಾಕಬಾರದು ಎಂಬ ಬಗ್ಗೆ ತಿಳಿವಳಿಕೆ ಇರಬೇಕು ಎಂದು ಮುಖ್ಯಶಿಕ್ಷಕಿ ಶೈನಾಜ್ ಹೇಳಿದರು.
ಇದನ್ನೂ ಓದಿ: ಪರಿಸರ ರಕ್ಷಿಸಲು ಪ್ಲಾಸ್ಟಿಕ್ ನಿಷೇಧವಾಗಲಿ
ವಿ.ವೈ.ಘೋರ್ಪಡೆ ನಗರದ ಸ್ಕಂದ ವಲಯದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಸಕಿಪ್ರಾ ಶಾಲೆಯಿಂದ ಗುರುವಾರ ಹಮ್ಮಿಕೊಂಡಿದ್ದ ಪರಿಸರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಪಂ ಸದಸ್ಯ ರೆಡ್ಡಿಬಾಬು ಮಾತನಾಡಿ, ಮನೆಗೊಂದು ಮರ ಉರಿಗೊಂದು ವನ, ನಾಡಿಗೊಂದು ಕಾಡು ಬೆಳೆಸಬೇಕು. ಗಿಡ ಮರಗಳು ಬೆಳೆದರೆ ಯಥೇಚ್ಛವಾಗಿ ಆಮ್ಲಜನಕ ದೊರೆಯುತ್ತದೆ. ಗಿಡಗಳನ್ನು ಕಡಿದು ನಾಶ ಮಾಡಬೇಡಿ ಮಕ್ಕಳನ್ನು ಬೆಳೆಸಿದಂತೆ ಗಿಡ ಮರಗಳನ್ನು ಬೆಳೆಸಬೇಕು ಎಂದರು. ಪರಿಸರ ಉಳಿಸಿ ಬೆಳೆಸುವ ಕುರಿತು ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಕೃಷಿ ಮೇಲ್ವಿಚಾರಕ ವಿಠ್ಠಲ್ ಪೂಜಾರಿ, ವಲಯ ಮೇಲ್ವಿಚಾರಕಿ ಗಿರಿಜಾ, ಗ್ರಾಪಂ ಸದಸ್ಯರಾದ ಇರ್ಷಾದ್, ಗೌಸಿಯಾಬೇಗಂ, ಸಂಘದ ಅಧ್ಯಕ್ಷೆ ಕವಿತಾ, ಸೇವಾ ಪ್ರತಿನಿಧಿ ಪದ್ಮಾವತಿ, ಪ್ರಮುಖರಾದ ಲಲಿತಾ, ಅನುರಾಧಾ, ಗೀತಾ, ಸಾವಿತ್ರಿ, ಹೇಮಾವತಿ, ಶೋಭಾ ಇದ್ದರು.