

ಗೋಕರ್ಣ: ಮನೆ ಕಟ್ಟುವಾಗ ಎರಡು ಮರ ಸ್ಥಳಾಂತರಿಸಿದ್ದರ ಪ್ರಾಯಶ್ಚಿತ್ತ ರೂಪವಾಗಿ ಖ್ಯಾತ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿನ ತಜ್ಞರೊಬ್ಬರು 101 ಸಸಿ ನೆಟ್ಟ ಅಪರೂಪದ ಘಟನೆ ಇಲ್ಲಿನ ಬಿದ್ರಗೆರೆ ಅರಣ್ಯ ಪ್ರದೇಶದ ಬೆಟ್ಟದಲ್ಲಿ ಇತ್ತೀಚೆಗೆ ನಡೆದಿದೆ.
ವಿದ್ಯಾಭ್ಯಾಸವನ್ನು ಇಲ್ಲಿಯೇ ಪೂರ್ಣಗೊಳಿಸಿ ಪುಣೆಯ ಎಂಎಸ್‌ಡಿ ಸಂಸ್ಥೆಯಲ್ಲಿ ಸಹ ನಿರ್ದೇಶಕರಾಗಿರುವ ರಾಸಾಯನಿಕ ತಜ್ಞ ಡಾ. ಕಿರಣ ಅಂಕ್ಲೇಕರ ಅವರು ವನಮಹೋತ್ಸವವನ್ನು ಸಂಘಟಿಸಿದವರು.
ಬಳಕ ಮಾತನಾಡಿದ ಅವರು, ಇಲ್ಲಿ ನೆಡಲಾದ ಎಲ್ಲ ಸಸಿಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಅಗತ್ಯ ಏರ್ಪಾಟು ಮಾಡುವ ಭರವಸೆ ನೀಡಿದರು.
ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ಮಾತನಾಡಿ, ಸ್ವಂತ ಖರ್ಚಿನಲ್ಲಿ ವನ ಸಂವರ್ಧನೆ ಮತ್ತು ಸಂಗೋಪನೆಯ ವಿಶಿಷ್ಟ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಪಹರೆ ವೇದಿಕೆ ಅಧ್ಯಕ್ಷ ನಾಗೇಶ ಗೌಡ, ಮಹೇಶ ಶೆಟ್ಟಿ, ರವಿ ಗುನಗ, ಹರೀಶ ಗೌಡ, ಇತರರು ಪಾಲ್ಗೊಂಡರು.ಶಿಕ್ಷಕಿ ಭವಾನಿ ಹೊಸ್ಮನೆ ನಿರ್ವಹಿಸಿದರು.