ಚಿಕ್ಕತ್ತೂರುವಿನಲ್ಲಿ ರೈತರಿಗೆ ಗಿಡಗಳ ವಿತರಣೆ

plant
Published on

ಕುಶಾಲನಗರ:

ಕೂಡುಮಂಗಳೂರು ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಬೆಂಗಳೂರಿನ ಇನ್ಸಿಟ್ಯೂಟ್ ಫಾರ್ ಸೋಷಿಯ್ ಆ್ಯಂಡ್ ಇಕನಾಮಿಕ್ಸ್ ಚೇಂಜ್ ಸಂಸ್ಥೆ ವತಿಯಿಂದ ಗ್ರಾಮದ ಎಲ್ಲಾ ರೈತರಿಗೂ ಉಚಿತವಾಗಿ ತಲಾ 10 ಗಿಡಗಳನ್ನು ಮಂಗಳವಾರ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಕೂಡುಮಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಭಾಸ್ಕರ್ ನಾಯಕ್ ಉದ್ಘಾಟನೆ ಮಾಡಿದರು.

ಚಿಕ್ಕತೂರಿನ ಶ್ರೀ ವಿನಾಯಕ ಯುವಕ ಸಂಘ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಕ್ಕೆ, ಲವಂಗ, ಜಾಯಿಕಾಯಿ, ಗೋಡಂಬಿ, ಏಲಕ್ಕಿ ಮುಂತಾದ ಗಿಡಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಇನ್ಸಿಟ್ಯೂಟ್ ಫಾರ್ ಸೋಷಿಯ್ ಆ್ಯಂಡ್ ಇಕನಾಮಿಕ್ಸ್ ಚೇಂಜ್ ಸಂಸ್ಥೆಯ ಪದಾಧಿಕಾರಿಗಳು, ವಿನಾಯಕ ಯುವಕ ಸಂಘದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net