

ಹಿರಿಯೂರು: ತಾಲೂಕಿನ ಹರಿಯಬ್ಬೆ ಗ್ರಾಮದ ಕೆಪಿಎಸ್ ಶಾಲೆ ಆವರಣದಲ್ಲಿ ಸೆ.9, 10ರಂದು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಆಯೋಜಿಸಲಾಗಿದೆ.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಗ್ರಾಪಂ ಅಧ್ಯಕ್ಷೆ ಆರ್.ಶಶಿಕಲಾ, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್, ತಾಪಂ ಮಾಜಿ ಅಧ್ಯಕ್ಷೆ ಶಾರದಮ್ಮ ವೆಂಕಟೇಶಪ್ಪ, ನಿವೃತ್ತ ಶಿಕ್ಷಕ ಜಯಣ್ಣ, ತಹಸೀಲ್ದಾರ್ ಸಿ.ರಾಜೇಶ್ ಕುಮಾರ್, ಡಿವೈಎಸ್ಪಿ ಚೈತ್ರಾ, ಇಒ ಶಿವಪ್ರಕಾಶ್, ಟಿಎಎಚ್‌ಒ ಡಾ. ಜಿ.ವೆಂಕಟೇಶ್, ಬಿಇಒ ತಿಪ್ಪೇರುದ್ರಪ್ಪ, ಪೌರಾಯುಕ್ತ ಮಹಂತೇಶ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.