ಸ್ವಚ್ಛತೆಗೆ ಆದ್ಯತೆ ನೀಡಿ

07 gvt 02
ಗಂಗಾವತಿಯ ತಾಪಂ ಕಚೇರಿ ಆವರಣದಲ್ಲಿ ಜಿಪಂಯಿಂದ ಗ್ರಾಮದ ನಡೆ ಸ್ವಚ್ಛತೆ ಕಡೆ ಪರಿಕಲ್ಪನೆಯಡಿ ಆಯೋಜಿಸಿದ್ದ ಸ್ವಚ್ಛತಾಚರಣೆಯ ಶ್ರಮದಾನ ಶನಿವಾರ ಹಮ್ಮಿಕೊಳ್ಳಲಾಗಿತ್ತು.ಯೋಜನಾಧಿಕಾರಿ ಎಸ್.ಗುರುಪ್ರಸಾದ, ಐಇಸಿ ಸಂಯೋಜಕ ಸೋಮನಾಥ ನಾಯಕ ಇತರರಿದ್ದರು.
Published on

ಗಂಗಾವತಿ: ಕಚೇರಿ, ಸುತ್ತಲಿನ ಪರಿಸರ ಸ್ವಚ್ಛವಾಗಿದ್ದಾಗ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ ಎಂದು ತಾಪಂ ಯೋಜನಾಧಿಕಾರಿ ಎಸ್. ಗುರುಪ್ರಸಾದ್ ಹೇಳಿದರು.

ತಾಪಂ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸ್ವಚ್ಛತಾ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು. ಕಚೇರಿ ಕಾರ್ಯಕ್ಕಾಗಿ ಬರುವ ಜನರಿಗೆ ಪರಿಸರದ ಬಗ್ಗೆ ಉತ್ತಮ ಅಭಿಪ್ರಾಯವಿರಬೇಕು. ವಾತಾವರಣ ಸ್ವಚ್ಛವಿದ್ದರೆ ಆರೋಗ್ಯ ಕಾಪಾಡಲು ಸಾಧ್ಯ. ಗಿಡಮರಗಳನ್ನು ಬೆಳೆಸುವುದರ ಜತೆಗೆ ತ್ಯಾಜ್ಯ ವಿಲೇವಾರಿಯತ್ತ ಗಮನಹರಿಸಬೇಕು. ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ವಿ ಷಯ ನಿರ್ವಾಹಕರಾದ ಶ್ರೀನಿವಾಸ ಭೀಮಣ್ಣ, ರಮೇಶ, ಶರಣಪ್ಪ, ರಾಘವೇಂದ್ರ, ರಂಗಮ್ಮ, ಐಇಸಿ ಸಂಯೋಜಕ ಸೋಮನಾಥ ನಾಯಕ, ತಾಂತ್ರಿಕ ಸಂಯೋಜಕ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net