

ಮುರಗುಂಡಿ: ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನೆ ಸಹಕಾರಿಯಾಗಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಹೇಳಿದರು.
ಗ್ರಾಮದಲ್ಲಿ ಈಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಾಲ ಸೌಲಭ್ಯ ನೀಡುತ್ತಿದ್ದು, ಮಹಿಳೆಯರು ಹೈನುಗಾರಿಕೆ ಸೇರಿ ವಿವಿಧ ಸ್ವಉದ್ಯೋಗ ಕೈಗೊಳ್ಳಬೇಕು ಎಂದು ತಿಳಿಸಿದರು.
ಮುಖಂಡ ಸುನೀಲ ಪವಾರ ಮಾತನಾಡಿದರು. ಸೇವಾ ಪ್ರತಿನಿಧಿ ಭೀಮಪ್ಪ ಕರಸಿದ್ಧಗೋಳ, ಮುಖಂಡರಾದ ಹೊಳೆಪ್ಪ ಪೂಜಾರಿ, ಮಕಬುಲ್ ನಧಾಪ್, ಸಿದ್ಧಪ್ಪ ಪೂಜಾರಿ, ಲಕ್ಷ್ಮೀಬಾಯಿ ಕಾಂಬಳೆ, ಸಂಜಯ ಸಣಮೂರಿ, ಹೊನ್ನಪ್ಪ ಅವರಾದಿ, ಮಾರುತಿ ಸಣಮೂರಿ, ಸುರೇಶ ಸನದಿ, ಪೂಜಾ ಝಂಡೆ, ನೀಲವ್ವ ಕರಸಿದ್ದಗೋಳ ಇತರರಿದ್ದರು. ವಲಯ ಮೇಲ್ವಿಚಾರಕ ಸಂತೋಷ ಗಂದಿಗವಾಡ ನಿರೂಪಿಸಿದರು.