ಸಾಧನೆಗೆ ಯೋಜನಾಬದ್ಧ ಅಧ್ಯಯನ ಅವಶ್ಯ

Planned study is essential for success.
ಚಿಮ್ಮಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಕ್ಷೇತ್ರ ನಿವೃತ್ತ ಶಿಕ್ಷಣಾಧಿಕಾರಿ ಸಿ.ಎಂ. ನೇಮಗೌಡ ಉದ್ಘಾಟಿಸಿದರು. ಎಂ.ಎಸ್. ಜಿಟ್ಟಿ, ದಾಕ್ಷಾಯಿಣಿ ಮಂಡಿ. ಡಿ.ಬಿ. ಬಡಿಗೇರ, ಜಿ.ಎಸ್. ಕುಲಕರ್ಣಿ, ಮಾರುತಿ ಮಮದಾಪೂರ, ಪ್ರಕಾಶ ಪಾಟೀಲ ಮತ್ತಿತರರಿದ್ದಾರೆ.
Published on

ಚಿಮ್ಮಡ: ಕಠಿಣ ಪರಿಶ್ರಮದೊಂದಿಗೆ ಯೋಜನಾ ಬದ್ದವಾಗಿ ಅಧ್ಯಯನ ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಎಂದು ಕ್ಷೇತ್ರ ನಿವೃತ್ತ ಶಿಕ್ಷಣಾಧಿಕಾರಿ ಸಿ.ಎಂ. ನೇಮಗೌಡ ಹೇಳಿದರು.

ಚಿಮ್ಮಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದ ಕುರಿತು ತಿಳುವಳಿಕೆ ಮೂಡಿಸಿಕೊಳ್ಳಬೇಕು. ತಮಗೆ ಆಸಕ್ತಿ ಇರುವ ವಿಷಯದಲ್ಲಿ ಹೆಚ್ಚಿನ ಸಾಧನೆಗೆ ಮುಂದಾಗಬೇಕು. ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿಕೊಡುವಲ್ಲಿ ಪೋಷಕರ ಮತ್ತು ಶಿಕ್ಷಕರ ಸಹಕಾರ ಅಗತ್ಯವಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಪ್ರಭು ನೇಸೂರ ಮಾತನಾಡಿ, ಸತತ ಅಧ್ಯಯನದ ಮೂಲಕ ಶೈಕ್ಷಣಿಕ ಜೀವನದಲ್ಲಿ ಮಹತ್ವದ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಂ.ಎಸ್. ಜಿಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ಸಮನ್ವಯ ಅಧಿಕಾರಿ ದಾಕ್ಷಾಯಿಣಿ ಮಂಡಿ, ಶಿಕ್ಷಕ ಡಿ.ಬಿ. ಬಡಿಗೇರ, ಜಿ.ಎಸ್. ಕುಲಕರ್ಣಿ ಮಾತನಾಡಿದರು. ಇತ್ತೀಚೆಗೆ ವರ್ಗಾವಣೆಗೊಂಡ ಶಿಕ್ಷಕಿ ಟಿ.ವಿ. ವೀರಗೌಡರ ಅವರನ್ನು ಸತ್ಕರಿಸಿ ಬೀಳ್ಕೊಡಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ, ಪ್ರಕಾಶ ಪಾಟೀಲ, ಉಪನ್ಯಾಸಕ ಎಚ್.ಎಂ. ಕುಂಬಾರ, ಮಹಾದೇವ ಪಾಲಭಾವಿ, ಪ್ರಭು ಆನ್ಯಾಗೋಳ, ಶಿವಪ್ಪಾ ದೊಡಮನಿ, ನಂದೇಶ ಬರಗಲ್, ಪತ್ರಕರ್ತ ಇಲಾಹಿ ಜಮಂಖಡಿ ಮತ್ತಿತರರಿದ್ದರು. ಶಿಕ್ಷಕ ಪಿ.ಬಿ. ಮುಧೋಳ ಸ್ವಾಗತಿಸಿದರು, ಉಷಾ ಬಾಬು ಕಟ್ಟಿಮನಿ ನಿರೂಪಿಸಿದರು ಹಾಗೂ ಎಂ.ಎಲ್. ಜಮಾದರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net