ಸಸಿ ನೆಟ್ಟು ಅದನ್ನು ಬೆಳೆಸುವ ಸಂಕಲ್ಪ ಮಾಡಬೇಕು: ಎಸ್. ವ್ಹಿ. ಸಂಕನೂರ

WhatsApp Image 2023-09-12 at 4.03.25 PM
Published on

ಗದಗ: ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಹರ ವಲಯ ಗದಗ, ಅರಣ್ಯ ಪರಿಸರ ಮತ್ತು ಜೀವಶಾಸ್ತ ಇಲಾಖೆ ಇವರ ಸಹಯೋಗದಲ್ಲಿ ಸಸ್ಯ ಶ್ಯಾಮಲ ಕಾರ್ಯಕ್ರಮವನ್ನು ನಗರದ ಎಸ್. ಎಂ. ಕೃಷ್ಣಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿಸಲಾಯಿತು.
ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ವಿಧಾನ ಪರಿಷತ್ ಸದಸ್ಯರಾದ ಎಸ್. ವ್ಹಿ. ಸಂಕನೂರ ಸಸಿ ನೆಡುವ ಮುಖಾಂತರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಭೂಮಿ ಮೇಲೆ ಮನುಷ್ಯರಲ್ಲದೇ ಪ್ರಾಣಿ ಪಕ್ಷಿಗಳು ವಾಸವಾಗುತ್ತಿದ್ದು, ಸಾವಿರಾರು ಜಾತಿಯ ಪ್ರಾಣಿ ಪಕ್ಷಿಗಳಿದ್ದು ಇವುಗಳ ಮಧ್ಯೆಯು ಸಮತೋಲನ ಕಾಯ್ದುಕೊಳ್ಳಲು ಅರಣ್ಯ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ಮಕ್ಕಳು ತಮ್ಮ ಹುಟ್ಟು ಹಬ್ಬವನ್ನು ಆಚರಿಸುವಾಗ ಮನೆಯಲ್ಲಿ ಒಂದು ಸಸಿ ನೆಟ್ಟು ಅದನ್ನು ಬೆಳೆಸಿ ನಾಡನ್ನು ಹಸಿರನ್ನಾಗಿಸುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಮಂಜು ಕೆ. ಹುಯಿಲಗೋಳ ಅವರಿಗೆ ಗದಗ ಜಿಲ್ಲಾ ಅತ್ಯುತಮ ಶಿಕ್ಷಕ ಪ್ರಶಸ್ತಿ ಪಡೆದ ನಿಮಿತ್ಯ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಬಸವರಾಜ ಕಡೇಮನಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಈಶ್ವರ ನಾಯ್ಕ, ಶ್ರೀಮತಿ ಸಿದ್ದಮನಹಳ್ಳಿ, ಜಿ. ಎಲ್. ಬಾರಾಟಕ್ಕೆ, ಎಂ. ಎ. ರಡ್ಡೇರ, ಡಿ. ಆಯ್. ಅಸುಂಡಿ, ಎಸ್. ಸಿ. ನಾಗರಳ್ಳಿ, ವಿವೇಕಾನಂದಗೌಡ ಪಾಟೀಲ, ಎಸ್. ಕೆ. ಮಂಗಳಗುಡ್ಡ, ಎಸ್. ಡಿ. ಕುರಿ, ಶ್ರೀ ಮುಲ್ಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಿಆರ್‌ಪಿ, ಬಿ.ಆರ್‌ಪಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆರ್. ಎಸ್. ಬುರಡಿ ಮಾಡಿದರು. ಪ್ರಕಾಶ ಮಂಗಳೂರ ನಿರೂಪಿಸಿದರು. ವಂದನಾರ್ಪಣೆಯನ್ನು ಹೆಚ್. ಆರ್. ಕೋಣಿಮನಿ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net