ಯೋಜನೆ ಸದುಪಯೋಗಪಡಿಸಿಕೊಳ್ಳಲಿ

12blh1 dodavad news
Published on

ಬೈಲಹೊಂಗಲ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಹಲವಾರು ಯೋಜನೆ ಜಾರಿಗೊಳಿಸಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಶ್ರೀ ಸಂಗಮೇಶ್ವರ ಪಿಕೆಪಿಎಸ್​ ಅಧ್ಯ ನಿಂಗಪ್ಪ ಚೌಡಣ್ಣವರ ಹೇಳಿದರು.

ತಾಲೂಕಿನ ದೊಡವಾಡ ಗ್ರಾಮದ ಶ್ರೀ ಸಂಗಮೇಶ್ವರ ಪಿಕೆಪಿಎಸ್​ನ ರಿಯಾಯಿತಿ ಬಡ್ಡಿ ದರದ ಟ್ರ್ಯಾಕ್ಟರ್​ ಸಾಲ ಯೋಜನೆಯಡಿ ಮಂಗಳವಾರ ರೈತ ಸೋಮಲಿಂಗಪ್ಪ ಯರಿಕಿತ್ತೂರ ಅವರಿಗೆ ಹೊಸ ಟ್ರ್ಯಾಕ್ಟರ್​ ವಿತರಿಸಿ ಮಾತನಾಡಿ, ಗ್ರಾಮದ ಒಟ್ಟು 38 ರೈತರಿಗೆ ಈ ಯೋಜನೆಯಡಿ ಟ್ರ್ಯಾಕ್ಟರ್​ವಿತರಿಸಲಾಗಿದೆ. ರೈತರು ಕೃಷಿ ಚಟುವಟಿಕೆಗಳ ಜತೆಗೆ ಹೈನುಗಾರಿಕೆಯಂತಹ ಉಪ ಕಸಬು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬ್ಯಾಂಕ್​ ಇನ್​ಸ್ಪೆಕ್ಟರ್​ ಎಸ್​.ವಿ.ಗಣಾಚಾರಿ, ನಿರ್ದೇಶಕ ಸಂಗಮೇಶ ಅಂದಾನಶೆಟ್ಟಿ, ಸಿಇಒ ಎಂ.ಎಸ್​.ಶಿಂಧೆ, ಹನಮಂತ ಸಪ್ಪಡ್ಲಿ, ಅನಂತ ಗಾಡಣ್ಣವರ, ವಿರೂಪಾ ಪಟಾತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net