

ಗೋಕಾಕ: ಹೈನುಗಾರರಿಗೆ ಅನುಕೂಲವಾಗುವ ಸದುದ್ದೇಶದಿಂದ ಸರ್ಕಾರದ ಸಹಯೋಗದಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಹಲವಾರು ಯೋಜನೆ ರೂಪಿಸಿದೆ. ಯೋಜನೆ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಬೆಮ್ಯೂಲ್ ಅಧ್ಯ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎನ್ಎಸ್ಎ್ ಕಾರ್ಯಾಲಯದಲ್ಲಿ ಶನಿವಾರ ಗೊಕಾಕ&ಮೂಡಲಗಿ ಉಪ ಕೇಂದ್ರದಿಂದ ಲಾನುಭವಿಗಳಿಗೆ 7.15 ಲ ರೂ. ಚೆಕ್ ವಿತರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಜಿಲ್ಲಾ ಹಾಲು ಒಕ್ಕೂಟವನ್ನು ಮಾದರಿ ಮಾಡುವ ಸಂಕಲ್ಪ ಹೊಂದಲಾಗಿದೆ. ರೈತರು ಉತ್ತಮವಾಗಿರಬೇಕು ಎಂಬ ದೂರ ದೃಷ್ಟಿಕೋನದಿಂದ ನಂದಿನಿ ಹಾಲಿನ ದರ ಹೆಚ್ಚಿಸಲಾಗಿದೆ ಎಂದರು.
ಎಮ್ಮೆ ಮತ್ತು ಆಕಳು ಹಾಲಿನ ಬೆಲೆ ಕ್ರಮವಾಗಿ 3.40 ರೂ. ಮತ್ತು 1 ರೂ. ಹೆಚ್ಚಿಸಿದೆ. ನಮ್ಮ ಸಂಸ್ಥೆ ಆದಾಯಕ್ಕಿಂತ ಹೈನುಗಾರರ ಏಳಿಗೆಯೇ ಮುಖ್ಯ ಧ್ಯೇಯವಾಗಿದೆ. ಬೆಮ್ಯುಲ್ ಅಧ್ಯನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸಂಸ್ಥೆ ಲಾಭದತ್ತ ಸಾಗಿದೆ. ಒಟ್ಟಿನಲ್ಲಿ ಮಾಸಾಂತ್ಯಕ್ಕೆ 5&7 ಕೋಟಿ ರೂ. ಲಾಭ ನಿರೀಸಲಾಗಿದೆ. ರೈತ ಸಮುದಾಯ, ಗ್ರಾಹಕರು ಹಾಗೂ ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಲಾನುಭವಿಗಳಿಗೆ ಚೆಕ್ ವಿತರಣೆ: ಶಾಸಕ ಬಾಲಚಂದ್ರ ಜಾರಕಿಹೊಳಿ ರಾಸು ವಿಮೆ ಯೋಜನೆಯಡಿ ತಲಾ 50 ಸಾವಿರ ರೂ.ಗಳಂತೆ 10 ಲಾನುಭವಿಗಳಿಗೆ 5 ಲ ರೂ, ಪಾಯಿ, ರೈತ ಕಲ್ಯಾಣ ಸಂದಿಂದ 9 ಲಾನುಭವಿಗಳಿಗೆ ತಲಾ 20 ಸಾವಿರ ರೂ ಹಾಗೂ ಇಬ್ಬರಿಗೆ 35 ಸಾವಿರ ಸೇರಿ ಒಟ್ಟು 7.15 ಲ ರೂ. ಚೆಕ್ ವಿತರಿಸಿದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಗೋಕಾಕ&ಮೂಡಲಗಿ ಉಪ ಕೇಂದ್ರದ ಅಧಿಕಾರಿ ಡಾ.ವೀರಣ್ಣ ಕೌಜಲಗಿ, ಉಪ ಕೇಂದ್ರದ ಅಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.