ಯೋಜನೆಗೆ ಭೂಮಿ ಕೊಟ್ಟವರಿಗೆ ಸೂಕ್ತ ಪರಿಹಾರ

0101
Published on

ಹಾರೂಗೇರಿ: ಕುಡಚಿ ಬಾಗಲಕೋಟ ರೈಲ್ವೆ ಯೋಜನೆಯ ಕಾಮಗಾರಿಗೆ ಭೂಮಿ ನೀಡುವ ರೈತ ಕುಟುಂಬಗಳಿಗೆ ಜಮೀನಿನ ಬೆಲೆಯೊಂದಿಗೆ ಅರ್ಧಕ್ಕಿಂತ ಹೆಚ್ಚು ಜಮೀನು ಕಳೆದುಕೊಳ್ಳುವ ರೈತರಿಗೆ ಮರು ವಸತಿ ಕಲ್ಪಿಸಲು ಐದು ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಲಿದೆ. ಅರ್ಧಕ್ಕಿಂತ ಹೆಚ್ಚು ಜಮೀನು ಕಳೆದುಕೊಳ್ಳುವ ರೈತರು ಆಕ್ಷೇಪಣೆ ಸಲ್ಲಿಸಬಹುದು ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಹೇಳಿದ್ದಾರೆ.

ಪಟ್ಟಣದ ಶ್ರೀ ಚನ್ನವೃಷಭೇಂದ್ರ ಲೀಲಾಮಠದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕುಡಚಿ-ಬಾಗಲಕೋಟೆ ರೈಲ್ವೆ ಯೋಜನೆ ಆಡಳಿತಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರ ಭೂ ಸ್ವಾಧೀನ ನಿಯಮ ರೈಲ್ವೆ ಇಲಾಖೆ ಕಲಂ 16(2) ರ ಆಕ್ಷೇಪಣೆಗಳ ಕುರಿತು ಹಾರೂಗೇರಿ, ಬಡಬ್ಯಾಕೂಡ ಮತ್ತು ಯಬರಟ್ಟಿ ಗ್ರಾಮಗಳ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.

ಜಮಖಂಡಿ ಮತ್ತು ಚಿಕ್ಕೋಡಿಯ ಭೂ ಸ್ವಾಧೀನ ಅಧಿಕಾರಿಗಳ ನಿರ್ಲಕ್ಷೃದಿಂದ 816 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ಬರಬೇಕಾದ ಕಾಮಗಾರಿಯು ಇಂದು 2200 ಕೋಟಿ ರೂ. ಖರ್ಚು ಮಾಡುವ ಅನಿವಾರ್ಯತೆ ಸರ್ಕಾರಕ್ಕೆ ಬಂದಿದೆ. ಆದ್ದರಿಂದ ಮತ್ತೆ ವಿಳಂಬ ಮಾಡದೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ರಾಜ್ಯ ರೈಲ್ವೆ ಸಮಿತಿ ರಾಜ್ಯಾಧ್ಯಕ್ಷ ಕುತುಬುದ್ದೀನ್ ಖಾಜಿ ಹೇಳಿದರು. ಆಕ್ಷೇಪಣೆ ಸಲ್ಲಿಸುವ ಮೊದಲು ರೈಲು ಕಾಮಗಾರಿಗೆ ತಗಲುವ ಜಾಗದ ಗುರುತು ಮಾಡಿ ನಂತರ ಅಹವಾಲು ಮತ್ತು ಆಕ್ಷೇಪಣೆ ಕೇಳುವುದು ಸೂಕ್ತ ಎಂದು ಪ್ರಗತಿಪರ ರೈತ ಈರನಗೌಡ ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net