ಕಟ್ಟಡ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಯೋಜನೆ

Hadagali Akki
ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ವಿವೇಕಾನಂದ ಸರ್ಕಾರಿ ಪ್ರೌಢಶಾಲೆಯ ಆವರಣದ ಕಸದ ರಾಶಿಯಲ್ಲಿ ಬಿಸಿಯೂಟದ ಅಕ್ಕಿ ಎಸೆದಿರುವುದು.
Published on

ಮೈಸೂರು: ನಗರದ ಕಟ್ಟಡ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ನಗರ ಪಾಲಿಕೆ 15 ಕೋಟಿ ರೂ.ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅನುಮೋದನೆ ಹಂತದಲ್ಲಿದೆ. ಯೋಜನೆಯಿಂದ ನಿತ್ಯವೂ ನಗರದಲ್ಲಿ ಸಂಗ್ರಹವಾಗುವ ಕಟ್ಟಡ ತ್ಯಾಜ್ಯ ಸದ್ಬಳಕೆಯಾಗಲಿದೆ.

ರಿಂಗ್ ರಸ್ತೆಯ ಹಲವು ಕಡೆ, ವಿಜಯನಗರ 2ನೇ, 4ನೇ ಹಂತ, ಕೆರೆಗಳು, ಪೋಷಕ ಕಾಲುವೆ ಹೀಗೆ ಖಾಲಿ ಇರುವ ಸರಕಾರಿ ಜಾಗಗಳಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಕಟ್ಟಡ ತ್ಯಾಜ್ಯ ನಿರ್ವಹಣೆ ನಗರದ ಬಹುದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿದೆ. ಸದ್ಯ ಮೈಸೂರಿನಲ್ಲಿ ಉತ್ಪತ್ತಿಯಾಗುವ 500 ಟನ್ ಕಸದಲ್ಲಿ100 ಟನ್ ಕಟ್ಟಡ ತ್ಯಾಜ್ಯ ಬರುತ್ತಿದೆ. ಇದರಲ್ಲಿ ಒಂದಷ್ಟು ಭಾಗವನ್ನು ಸಿವೇಜ್ ಫಾರಂನ ಜಸ್ಕೊ ಪ್ಲಾಂಟ್ ಲ್ಯಾಂಡ್ ಫಿಲ್‌ಗೆ ಹಾಕಲಾಗುತ್ತಿದೆ.

ಕಟ್ಟಡ ತ್ಯಾಜ್ಯ ನಿರ್ವಹಣೆಯೇ ಪ್ರತ್ಯೆಕ ಸವಾಲಾಗಿದೆ. ಅದನ್ನು ಈ ಬಾರಿ ಸೂಕ್ತ ರೀತಿ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆಯುವ ವಿಶ್ವಾಸವಿದೆ. ಶೀಘ್ರದಲ್ಲಿಯೇ ಈ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.0

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net