ತಡೆಗೋಡೆ ನಿರ್ಮಾಣಕ್ಕೆ ಶಾಸಕ ರವಿಕುಮಾರ್ ಪ್ಲ್ಯಾನ್: ನಂದಾ ವೃತ್ತದಲ್ಲಿ ರಸ್ತೆ ಪರಿಶೀಲನೆ

Plan for construction of barrier Mandya
Published on

ಮಂಡ್ಯ: ನಗರದ ನಂದಾ ವೃತ್ತದಿಂದ ಪೇಟೆಬೀದಿಗೆ ತೆರಳುವ ರಸ್ತೆಯ ಎರಡು ಬದಿ ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕ ರವಿಕುಮಾರ್ ಗಣಿಗ ಪರಿಶೀಲನೆ ನಡೆಸಿದರು.

ನಂದಾ ವೃತ್ತದಿಂದ ಪೇಟೆ ಬೀದಿಗೆ ತೆರಳುವ ರಸ್ತೆ ಎರಡು ಬದಿ ತಡೆಗೋಡೆ ಇಲ್ಲ. ಜತೆಗೆ ಆಳವಾದ ಗುಂಡಿ ಇರುವುದರಿಂದ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಪ್ರತಿನಿತ್ಯ ಈ ಮಾರ್ಗದಲ್ಲಿ ಸಾವಿರಾರೂ ವಾಹನಗಳ ಸಂಚಾರ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಅನಾಹುತವಾಗದಂತೆ ಮುಂಜಾಗ್ರತಾ ವಹಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಅದರಂತೆ ಗುಂಡಿಗಳನ್ನು ಮುಚ್ಚುವ ಜತೆಗೆ ಎರಡು ಬದಿ ತಡೆಗೋಡೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಶಾಸಕ ರವಿಕುಮಾರ್ ಗಣಿಗ ಪರಿಶೀಲಿಸಿದರು. ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಡಾ ಅಧ್ಯಕ್ಷ ನಹೀಂ ಇತರರಿದ್ದರು.

ಅಭಿವೃದ್ಧಿಗೆ ಚಾಲನೆ: ನಗರದ ಮರೀಗೌಡ ಬಡಾವಣೆಯ 8ನೇ ವಾರ್ಡಿನಲ್ಲಿ 12.38 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಪೌರಾಯುಕ್ತೆ ಪಂಪಾಶ್ರೀ, ಮಾಜಿ ಅಧ್ಯಕ್ಷರಾದ ಲೋಕೇಶ್, ಎಚ್.ಎಚ್.ಎಸ್.ಮಂಜು, ಸದಸ್ಯರಾದ ಕುಮಾರ್, ಶ್ರೀಧರ್, ಗೀತಾ, ನಯೀಂ, ಮುಖಂಡ ಬಸವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net