ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿ

03 GVT 01
ವಸತಿ ನಿವೇಶನ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಅಂಗವಿಕಲರ ವಿಭಾಗದ ಸದಸ್ಯರು ಶಾಸಕ ಗಾಲಿ ಜನಾರ್ದನರೆಡ್ಡಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ ಹೊಸ್ಕೇರಾ, ತಾಲೂಕು ಅಧ್ಯಕ್ಷ ಅಶೋಕ ಗುಡಿಕೋಟಿ, ಪದಾಧಿಕಾರಿಗಳಾದ ಹುಸೇನ್‌ಸಾಬ್, ಶಂಕರ್ ಇತರರಿದ್ದರು.
Published on

ಗಂಗಾವತಿ: ವಸತಿ ನಿವೇಶನ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಅಂಗವಿಕಲರ ವಿಭಾಗದ ಸದಸ್ಯರು ಶಾಸಕ ಗಾಲಿ ಜನಾರ್ದನರೆಡ್ಡಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಜನಾರ್ದನರೆಡ್ಡಿಯನ್ನು ಭೇಟಿಯಾದ ಪದಾಧಿಕಾರಿಗಳು ಅಂಗವಿಕಲರ ಸಮಸ್ಯೆಗಳು ಮತ್ತು ಸರ್ಕಾರಿ ಯೋಜನೆ ಅನುಷ್ಠಾನ ವಿಳಂಬದ ಕುರಿತು ಚರ್ಚಿಸಿದರು. ತಾಲೂಕು ಅಧ್ಯಕ್ಷ ಅಶೋಕ ಗುಡಿಕೋಟಿ ಮಾತನಾಡಿ, 2014ರಿಂದಲೂ ನಗರಸಭೆಯಲ್ಲಿ ಅಂಗವಿಕಲರ ಕೋಟಾದಡಿ ವಸತಿ ನಿವೇಶನ ಮನವಿ ಮಾಡಿದರೆ, ಇದುವರಿಗೂ ಈಡೇರಿದಿಲ್ಲ.

ನಗರಸಭೆ ಮೊದಲ ಮಹಡಿಯಲ್ಲಿ ಕೆಲಸ ನಿರ್ವಹಿಸಿಕೊಳ್ಳಲು ಮೆಟ್ಟಿಲು ಅವಲಂಭಿಸಬೇಕಿದೆ. ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಅರ್ಜಿ ಸಲ್ಲಿಸಿದರೂ, ಅರ್ಜಿ ವಿಲೇವಾರಿಯಾಗಿಲ್ಲ. ಅಂಗವಿಕಲರಿಗೆ ಮೀಸಲಾದ ಅನುದಾನ ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ವಿಲವಾಗಿದ್ದು, ಶಾಸಕರ ಅನುದಾನದಲ್ಲಿ ವಿತರಿಸುತ್ತಿರುವ ತ್ರಿಚಕ್ರ ವಾಹನ ಸೌಲಭ್ಯ ಕಲ್ಪಿಸಿಲ್ಲ. ಅಂಗವಿಕಲರಿಗೆ ಮೀಸಲಾದ ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net