

ಶಿರ್ವ: ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ತಮ್ಮ ಕೌಶಲಗಳನ್ನು ವೃದ್ಧಿಸಿಕೊಳ್ಳುವುದು ಅನಿವಾರ್ಯ. ಅಂಕಿ ಅಂಶಗಳ ಪ್ರಕಾರ ಶೇ.83ರಷ್ಟು ನಿರುದ್ಯೋಗ ಸಮಸ್ಯೆಯನ್ನು ಇಂದು ಕಾಣುತ್ತಿದ್ದೇವೆ. ಆದ್ದರಿಂದ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡಲ್ಲಿ ತಮ್ಮ ಕೌಶಲ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಪ್ರಾಂಶುಪಾಲ ಡಾ.ಹೆರಾಲ್ಡ್ ಐವನ್ ಮೋನಿಸ್ ಹೇಳಿದರು.
ಸಂತ ಮೇರಿ ಮಹಾವಿದ್ಯಾಲಯ ಶಿರ್ವದಲ್ಲಿ ವೃತ್ತಿ ಸಮಾಲೋಚನೆ, ಮಾರ್ಗದರ್ಶನ ಮತ್ತು ನಿಯೋಜನೆ ಕೋಶ ಹಾಗೂ ಐಕ್ಯೂಎಸಿ ಜಂಟಿಯಾಗಿ ಇತ್ತೀಚೆಗೆ ಏರ್ಪಡಿಸಿದ್ದ ಪ್ಲೇಸ್ಮೆಂಟ್ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಉಡುಪಿಯ ಪಿಪಿಸಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಧ್ಯಾಪಕ ಜೈಕಿಶನ್ ಭಟ್ ಕ್ಯಾಂಪಸ್ ಸಂದರ್ಶನಕ್ಕೆ ಬೇಕಾಗುವ ತರಬೇತಿ ನೀಡಿದರು.
ವಾಣಿಜ್ಯಶಾಸ್ತ್ರ ವಿಭಾಗ ಉಪನ್ಯಾಸಕ ರಾಘವೇಂದ್ರ ಹೆಗ್ಡೆ, ವಿದ್ಯಾರ್ಥಿಗಳಾದ ಅನೂಪ್ ನಾಯಕ್, ಆಲಿಸ್ಟರ್ ಸುಜಾಯ್ ಡಿಸೋಜ ಉಪಸ್ಥಿತರಿದ್ದರು.
ಇತಿಹಾಸ ವಿಭಾಗ ಮುಖ್ಯಸ್ಥ ಪ್ರೇಮನಾಥ್ ಸ್ವಾಗತಿಸಿ, ಕಾಲೇಜಿನ ವೃತ್ತಿ ಸಮಾಲೋಚನೆ, ಮಾರ್ಗದರ್ಶನ ಮತ್ತು ನಿಯೋಜನೆ ಕೋಶ ಸಂಯೋಜಕ ಕೆ.ಪ್ರವೀಣ್ ಕುಮಾರ್ ವಂದಿಸಿದರು. ಗ್ರಂಥಪಾಲಕಿ ತನುಜಾ ಎನ್.ಸುವರ್ಣ ನಿರೂಪಿಸಿದರು.