

ಬೆಂಗಳೂರು: ಲವ್ಲೀ ಪ್ರೊಫೆಷನಲ್ ಯುನಿವರ್ಸಿಟಿ (ಎಲ್ಪಿಯು) ವತಿಯಿಂದ ಕ್ಯಾಂಪಸ್ ಪ್ಲೇಸ್ವೆುಂಟ್ನಲ್ಲಿ ಉದ್ಯೋಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಜತೆಗೆ, ಅವರ ಮುಂದಿನ ವೃತ್ತಿ ಬದುಕನ್ನು ಪ್ರೋತ್ಸಾಹಿಸುವ ಸಲುವಾಗಿ ಜಲಂಧರ್ನ ಶಾಂತಿ ದೇವಿ ಮಿತ್ತಲ್ ಸಭಾಂಗಣದಲ್ಲಿ ಪ್ಲೇಸ್ವೆುಂಟ್ ಡೇ ಆಚರಿಸಲಾಯಿತು.
ಎಲ್ಪಿಯು ಆಡಳಿತ ವರ್ಗ, ಅಧ್ಯಾಪಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತವರ ಪಾಲಕರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಎಲ್ಪಿಯು ಸಹ ಕುಲಪತಿ ರಶ್ಮಿ ಮಿತ್ತಲ್, ವಿದ್ಯಾರ್ಥಿಗಳ ವೃತ್ತಿ ಆಕಾಂಕ್ಷೆಗಳನ್ನು ಈಡೇರಿಸಲು ನಮ್ಮ ವಿಶ್ವವಿದ್ಯಾಲಯ ಸದಾ ಬದ್ಧವಾಗಿರುತ್ತದೆ ಎಂದು ಹೇಳಿದರು. ಪದವೀಧರ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧವಾಗಿಸುವ ಸಲುವಾಗಿ ನಮ್ಮ ಪಠ್ಯಕ್ರಮವನ್ನು ಇಂದಿನ ಉದ್ಯಮದ ಬೇಡಿಕೆಗಳಿಗೆ ಅನುಗುಣವಾಗಿ ನವೀಕರಿಸಲಾಗಿದ್ದು, ಇತ್ತೀಚಿನ ತಂತ್ರಜ್ಞಾನಗಳನ್ನು ಅದರಲ್ಲಿ ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ ಉದ್ಯಮ ಕ್ಷೇತ್ರದ ನಿರೀಕ್ಷೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಇದೇ ಕಾರಣದಿಂದ ವಿವಿಧ ಸಂಸ್ಥೆಗಳು ಎಲ್ಪಿಯುಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ರಶ್ಮಿ ಮಿತ್ತಲ್ ತಿಳಿಸಿದರು.
ಬಿ.ಟೆಕ್ ವಿದ್ಯಾರ್ಥಿನಿಗೆ 42 ಲಕ್ಷ ರೂಪಾಯಿ ಪ್ಯಾಕೇಜ್
ಎಲ್ಪಿಯುನ 2019-20ನೇ ಸಾಲಿನ ಸಾವಿರಾರು ವಿದ್ಯಾರ್ಥಿಗಳು ವಿವಿಧ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಫಾರ್ಚ್ಯೂನ್ 500 ಕಂಪನಿಗಳಲ್ಲೇ ಆಯ್ಕೆಯಾಗಿದ್ದಾರೆ. ಈ ಪೈಕಿ, ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ತಾನ್ಯಾ ಅರೋರ ಮೈಕ್ರೋಸಾಫ್ಟ್ ಕಂಪನಿಯಲ್ಲಿ ವಾರ್ಷಿಕ 42 ಲಕ್ಷ ರೂ. ಪ್ಯಾಕೇಜ್ ಪಡೆದಿರುವುದು ಅತ್ಯಧಿಕ ಪ್ಯಾಕೇಜ್ ಆಗಿದೆ. ಅಮೆಜಾನ್, ಬಾಷ್, ಕ್ಯಾಪ್ಜೆಮಿನಿ, ಕಾಗ್ನಿಜೆಂಟ್, ವಿಪ್ರೋ, ಟಿಸಿಎಸ್ ಸೇರಿ ಐನೂರಕ್ಕೂ ಅಧಿಕ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿಗಳೂ ಎಲ್ಪಿಯು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡಿವೆ. 25ಕ್ಕೂ ಅಧಿಕ ಸಂಸ್ಥೆಗಳು ವಿದೇಶಗಳಲ್ಲಿ ಉದ್ಯೋಗ ನೀಡಿವೆ. 200ಕ್ಕೂ ಅಧಿಕ ವಿದ್ಯಾರ್ಥಿ ಗಳು ವಾರ್ಷಿಕ 10 ಲಕ್ಷ ರೂ.ಗಳಿಗೂ ಅಧಿಕ ವೇತನವಿರುವ ಕೆಲಸಗಳಿಗೆ ಆಯ್ಕೆಯಾಗಿದ್ದಾರೆ.