ರಾಜ್ಯಮಟ್ಟದ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ

alva
ಪ್ರಥಮ ಸ್ಥಾನ ಪಡೆದ ಕ್ರಿಸ್ ಅಂಜೆನ್ ಬ್ಯಾಪ್ಟಿಸ್ಟ್ ಹಾಗೂ ಸುಮಿತ್ ಎ.ಆರ್.
Published on

ಮಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಬೆಂಗಳೂರಿನಲ್ಲಿ ಆಯೋಜಿಸಿದ 19ರ ವಯೋಮಿತಿಯ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಡಬಲ್ಸ್‌ನಲ್ಲಿ ಮಂಗಳೂರಿನ ಕ್ರಿಸ್ ಅಂಜೆನ್ ಬ್ಯಾಪ್ಟಿಸ್ಟ್ ಹಾಗೂ ಸುಮಿತ್ ಎ.ಆರ್ ಪ್ರಶಸ್ತಿ ಜಯಿಸಿದರು. ಫೈನಲ್ ಪಂದ್ಯದಲ್ಲಿ ಅಭಿಷೇಕ್ ಕೆ.ಕೆ ಹಾಗೂ ಲಕ್ಷ್ ಚೆಂಗಪ್ಪ ಅವರನ್ನು 21-19, 17-21, 21-17 ಅಂಕಗಳಿಂದ ಸೋಲಿಸಿ ಪ್ರಥಮ ಸ್ಥಾನ ಪಡೆದರು. ಕ್ರಿಸ್ ಅಂಜೆನ್ ಬ್ಯಾಪ್ಟಿಸ್ಟ್ ಹಾಗೂ ಸುಮಿತ್ ಎ.ಆರ್ ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳು. ಪ್ರಥಮ ಬಾರಿ ಮಂಗಳೂರಿನ ಆಟಗಾರರು ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ 17 ಮತ್ತು 19ರ ವಯೋಮಿತಿಯ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net