

ಇಳಕಲ್ಲ (ಗ್ರಾ): ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪಿಕೆಪಿಎಸ್) ಕಳೆದ ಸಾಲಿನಲ್ಲಿ ವಿವಿಧ ಸಾಲಗಳನ್ನು ವಿತರಿಸಿ ರೈತರ ಹಿತ ಕಾಪಾಡಿದೆ ಎಂದು ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಪೂಜಾರಿ ತಿಳಿಸಿದರು.
ಎಪಿಎಂಸಿ ಆವರಣದ ಸಂಘದ ಕಾರ್ಯಾಲಯದಲ್ಲಿ ಸೋಮವಾರ ನಡೆದ 47 ನೇ ಸರ್ವ ಸಾಧಾರಣ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ರ್ಯಾಕ್ಟರ್ ಸಾಲ 14.53 ಲಕ್ಷ ರೂ., ಹನಿ ನೀರಾವರಿ ಸಾಲ 22.20ಲಕ್ಷ ರೂ, ತೋಟಗಾರಿಕೆ ಸಾಲ 5 ಲಕ್ಷ ರೂ., ಬಿಕೆಸಿಸಿ ಸಾಲ 567.57 ಲಕ್ಷ ರೂ., ಬಿನ್ ಶೇತ್ಕಿ ಸಾಲ 67.15 ಲಕ್ಷ ರೂ., ಭೂ ಅಭಿವೃದ್ಧಿ ಸಾಲ 85.72 ಲಕ್ಷ ರೂ. ನೀಡಿದೆ ಎಂದು ವಿವರಿಸಿದರು.
ಸಂಘದ ಉಪಾಧ್ಯಕ್ಷ ರವಿ ಚಿತ್ತರಗಿ, ನಿರ್ದೇಶಕರಾದ ರಾಯನಗೌಡ ಪಾಟೀಲ, ಗುರು ಗಾಣಿಗೇರ, ಸುರೇಶ ಬಂಡರಗಲ್ಲ, ಬಸಪ್ಪ ಬಾದವಾಡಗಿ, ಮಹೇಶ ಪಾಟೀಲ, ಮಂಜುನಾಥ ಕಟಗಿ, ಜಕ್ಕಪ್ಪ ಕಳ್ಳಿಗುಡ್ಡ, ಸಿದ್ದಣ್ಣ ಘಂಟಿ,ಆರ್. ಆರ್. ರಾಠೋಡ, ಶಿಲ್ಪಾ ಲಕ್ಕುಂಡಿ, ಬಸಮ್ಮ ಮೂಲಿಮನಿ ಪಾಲ್ಗೊಂಡಿದ್ದರು.
ಕಾರ್ಯದರ್ಶಿ ವಿರೇಶ ಹೂಗಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ನಂದಿಕೋಲಮಠ ವಂದಿಸಿದರು. ಚೇತನ ಮನಗೂಳಿ ನಿರೂಪಿಸಿದರು.