

ಹುಕ್ಕೇರಿ: ಜಿಲ್ಲೆಯಲ್ಲಿ ಒಂದು ಕೋಟಿ ರೂ.ಗೂ ಅಕ ಆರ್ಥಿಕ ಲಾಭ ಗಳಿಸಿದ ಬೆರಳೆಣಿಕೆಯಷ್ಟು ಪಿಕೆಪಿಎಸ್‌ಗಳಲ್ಲಿ ಗುಡಸ ಸಹಕಾರಿಯು ಒಂದಾಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ಮಾರ್ಗದರ್ಶನ, ಶಾಸಕ ನಿಖಿಲ ಕತ್ತಿ ಅವರ ಸಹಕಾರ ಕಾರಣ ಎಂದು ಗುಡಸ ಪಿಕೆಪಿಎಸ್ ಅಧ್ಯಕ್ಷ ಸದಾನಂದ ಹಿರೇಮಠ ಹೇಳಿದರು.
ತಾಲೂಕಿನ ಗುಡಸ ಗ್ರಾಮದ ಪಿಕೆಪಿಎಸ್ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 94ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿ, ಈ ವರ್ಷ 1.20 ಕೋಟಿ ರೂ.ಗೂ ಅಕ ನಿವ್ವಳ ಲಾಭ ಗಳಿಸಿದೆ. ಲಾಭದಲ್ಲಿ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಂಚಲಾಗಿದೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಎಸ್.ಎಸ್.ಮಲ್ಲಾಪುರೆ ಮಾತನಾಡಿ, ಶಿರಢಾಣ, ಝಾಂಗಟಿಹಾಳ, ಗುಡಸ, ಕೊಟಬಾಗಿ ಗ್ರಾಮಗಳಿಗೆ ಕಾರ್ಯಕ್ಷೇತ್ರ ಹೊಂದಿದ್ದು, ಸಹಕಾರಿ ರೈತರಿಗೆ ಎಲ್ಲ ರೀತಿಯ ಸಾಲ, ಬೀಜ, ರಸಗೊಬ್ಬರ ಹಂಚುತ್ತಿದೆ. ಸದಸ್ಯರಿಗೆ 38.56 ಕೋಟಿ ರೂ.ಸಾಲ ವಿತರಿಸಿದೆ. 2,695 ಸದಸ್ಯರನ್ನು ಹೊಂದಿದ ಸಹಕಾರಿ 57.69 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 32.08 ಕೋಟಿ ರೂ. ಠೇವು ಸಂಗ್ರಹಿಸಿದೆ ಎಂದರು.
ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಹಕಾರಿ ಸದಸ್ಯರ ಮಕ್ಕಳನ್ನು ಸತ್ಕರಿಸಲಾಯಿತು. ಆರ್.ಜಿ.ನೇರ್ಲಿ ವರದಿ ಓದಿದರು. ಸಂಘದ ಅಧ್ಯಕ್ಷ ಸದಾನಂದ ಹಿರೇಮಠ, ಉಪಾಧ್ಯಕ್ಷ ಅಡಿವೆಪ್ಪ ಮಗದುಮ್ಮ, ನಿರ್ದೇಶಕರಾದ ಸಿದಗೌಡ ಪಾಟೀಲ, ರಾಯಪ್ಪ ಡೂಗ, ಮಲ್ಲಿಕಾರ್ಜುನ ನರಸನ್ನವರ, ಅಲಗೌಡ ದೊಡದನ್ನವರ, ಬಾಬು ಜಾರಕಿಹೊಳಿ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಮಲಗೌಡ ದೇಸಾಯಿ ಮುಖಂಡರಾದ ಶಿವನಗೌಡ ಪಾಟೀಲ, ಭೀಮಗೌಡ ಪಾಟೀಲ, ಸಂದೀಪ ಪಾಟೀಲ, ರಾಜಶೇಖರ ಕರೋಶಿ, ಕೆ.ಎಲ್.ಪಾಟೀಲ, ಸದಾಶಿವ ತೇಲಿ, ಬಸವರಾಜ ಭೂಸಾರಿ, ಗ್ಯಾನಪ್ಪ ಡೂಗ, ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಮಲ್ಲಾಪುರೆ, ಬಸವರಾಜ ಪಾಟೀಲ ಇತರರಿದ್ದರು.