

ಮಮದಾಪುರ: ಸಹಕಾರಿ ಸಂಗಳು ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿವೆ. ಶಾಸಕ ರಮೇಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಹೆಚ್ಚಿನ ಪತ್ತು ಪಡೆದು ಸಂದ ಎಲ್ಲ ರೈತ ಸದಸ್ಯರಿಗೆ ಸಾಲ ಹಂಚಿಕೆ ಮಾಡಲಾಗಿದೆ ಎಂದು ಸಂದ ಮಾಜಿ ಅಧ್ಯ ಅಡಿವೆಪ್ಪ ಭಂಡಿ ಹೇಳಿದರು.
ಗೋಕಾಕ ತಾಲೂಕಿನ ಮಾಲದಿನ್ನಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 65ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.
ಸಂದ ಕಾರ್ಯದರ್ಶಿ ಪ್ರಕಾಶ ಭುಜನ್ನವರ ವಾರ್ಷಿಕ ವರದಿ ಮಂಡಿಸಿ, ಸಂ ಒಟ್ಟು 1,692 ಸದಸ್ಯರನ್ನು ಹೊಂದಿ ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 6.64 ಕೋಟಿ ರೂ. ಬೆಳೆಸಾಲ, 14 ಲ ರೂ. ಟ್ರ್ಯಾಕ್ಟರ್ ಸಾಲ ನೀಡಿ 9.82 ಲ ರೂ. ಲಾಭ ಹೊಂದಿದೆ. ಸಂದ ಸಾಲಗಾರ ರೈತರು ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ ಸಂದಿಂದ 5 ಸಾವಿರ ರೂ. ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂದ ಅಧ್ಯ ಸಿದ್ದಪ್ಪ ವಡ್ಡರಗಾಂವಿ, ಉಪಾಧ್ಯ ಕುಮಾರ ಪಾಟೀಲ, ನಿರ್ದೇಶಕರಾದ ಹನುಮಂತ ಹೊನಕುಪ್ಪಿ, ಭಗವಂತ ಮಾಳೇದ, ಲಕ್ಷ$್ಮಣ ಖಾನಪ್ಪನವರ, ಚಿನ್ನಪ್ಪ ಪಾಟೀಲ, ಜಾನವ್ವ ಬಬಲಿ, ಕಾಶವ್ವ ಭಂಡಿ, ಲಕ್ಕವ್ವ ದಂಡಿನ, ಯಮನವ್ವ ಹರಿಜನ, ಮುಖಂಡರಾದ ಬೀರಪ್ಪ ದುರ್ಗಿಪೂಜೇರಿ, ರಾಮಣ್ಣ ಭಂಡಿ, ಯಲ್ಲಪ್ಪ ಭಂಗೆನ್ನವರ, ವಕೀಲ ರಮೇಶ ಭಂಡಿ, ಲಕ್ಕಪ್ಪ ಹೊಸಕುರುಬರ, ಸಣ್ಣಪ್ಪ ಭಂಡಿ ಇತರರಿದ್ದರು..