ಪಿಕೆಪಿಎಸ್ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ

1
ಅರಳಹಟ್ಟಿ ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತರು ನಾಮಪತ್ರ ಸಲ್ಲಿಸಿದರು. ತಾನಾಜಿ ಶಿಂಧೆ, ಕೇದಾರಿ ನಾಗರಾಳ, ಕಾಮಗೌಡ ಪಾಟೀಲ, ರವಿ ಸನದಿ, ಕೃಷ್ಣ ನಾಯಕ್ ಇತರರು ಇದ್ದರು.
Published on

ಸಂಬರಗಿ: ಸಮೀಪದ ಅರಳಹಟ್ಟಿ ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಚುನಾವಣೆ ಜನವರಿ 6.ರಂದು ಜರುಗುವ ನಿಮಿತ್ತ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಮಾರ್ಗದರ್ಶನದಲ್ಲಿ ರೈತ ಸರಕಾರ ವಿಕಾಸ್ ಪ್ಯಾನಲ್ ಮುಖಂಡರಾದ ಕಾಮಗೌಡ ಪಾಟೀಲ, ಕೇದಾರಿ ನಾಗರಾಳೆ, ತಾನಾಜಿ ಶಿಂಧೆ, ಯುವ ಮುಖಂಡ ಮಂಜುನಾಥ ಪಾಟೀಲ ನೇತೃತ್ವದಲ್ಲಿ ಅಭ್ಯರ್ಥಿಗಳು ಶುಕ್ರವಾರ ಶಕ್ತಿ ಪ್ರದರ್ಶನ ಮೂಲಕ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಬೆಂಬಲಿತ ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷ ಕಾಮಗೌಡ ಪಾಟೀಲ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಹಾಗೂ ಶಾಸಕ ರಾಜು ಕಾಗೆ ಪ್ರಯತ್ನದಿಂದ ಈ ಭಾಗದ ಸಂಘಗಳು ಕಷ್ಟದಿಂದ ಮುಕ್ತವಾಗಿವೆ. ಸದಸ್ಯರು ಹಾಗೂ ರೈತರು ನಮಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಪ್ಯಾನಲ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

12 ಸ್ಥಾನಕ್ಕೆ 40 ನಾಮಪತ್ರ ಸಲ್ಲಿಕೆಯಾಗಿವೆ. ಸಂಘಕ್ಕೆ ಒಟ್ಟು 2,854 ಮತದಾರಿದ್ದಾರೆ ಎಂದು ಚುನಾವಣಾ ಅಧಿಕಾರಿ ಬಿ.ಎಲ್.ಪೂಜಾರಿ ತಿಳಿಸಿದರು. ರವಿ ಸನದಿ, ಕೃಷ್ಣ ನಾಯಕ್, ಮಹಾದೇವ ಕಾಂಬಳೆ, ಗಜಾನನ ಅವಳೇಕರ್, ಪ್ರಕಾಶ ಮೋರೆ, ಶಿವಾಜಿ ನಾಯ್ಕ, ಸಂಜಯ್ ಬೇಡಿಗೆ, ರಾಮದಾಸ್ ಮಾನೆ, ಸಂಜಯ್ ಜಗತಾಪ, ಹನುಮಂತ ಸನಾದಿ, ಬಾಬಾಸಾಹೇಬ್ ರಾಜಕುಮಾರ್, ಜಲಿಂದರ್ ಗಂಗಾಧರ್, ಇಸಾಕ್ ಮುಲ್ಲಾ, ಭಾಸ್ಕರ್ ಕಾಂಬಳೆ, ಮಹಾದೇವ್ ಕಾಂಬಳೆ, ಬಲವಂತ ಅವಳೇಕರ್, ಮಹಾದೇವ ಬಿಸುರುಕರ್, ರಮೇಶ ಲಾಂಡಗೆ, ಅಬ್ದುಲ್ ಸೈಯದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net