ಪಿಕೆಪಿಎಸ್​ ಸಭೆಗೆ ಮುಖ್ಯ ಕಾರ್ಯನಿರ್ವಾಹಕ ಗೈರು!

10BGV6
Published on

ಚನ್ನಮ್ಮನ ಕಿತ್ತೂರು: ಬಿಡಿಸಿಸಿ ಬ್ಯಾಂಕ್​ ಚುನಾವಣೆ ಹಿನ್ನೆಲೆಯಲ್ಲಿ ಪಿಕೆಪಿಎಸ್​ ಪ್ರಾತಿನಿಧ್ಯ ಆಯ್ಕೆಗೆ ಸಂಬಂಧಿಸಿ ತಾಲೂಕಿನ ಉಗರಖೋಡ ಗ್ರಾಮದಲ್ಲಿ ಬುಧವಾರ ನಡೆಯಬೇಕಿದ್ದ ಸಭೆಗೆ ಮುಖ್ಯ ಕಾರ್ಯನಿರ್ವಾಹಕ ಹಾಗೂ ಕಂಪ್ಯೂಟರ್​ ಆಪರೇಟರ್​ ಗೈರುಹಾಜರಾದ ಕಾರಣ ಸಭೆ ಅರ್ಧಕ್ಕೆ ಸ್ಥಗಿತಗೊಂಡಿತು.

ಸಭೆಗೆ ಹಾಜರಾಗುವಂತೆ ಎಲ್ಲ ಸದಸ್ಯರಿಗೆ ಮುಖ್ಯ ಕಾರ್ಯನಿರ್ವಾಹಕರೇ ನೋಟಿಸ್​ ಜಾರಿ ಮಾಡಿದ್ದರು. ಎಲ್ಲ ಸದಸ್ಯರು ಸಭೆಗೆ ಹಾಜರಾಗಿದ್ದರು. ಪಿಕೆಪಿಎಸ್​ ಸದಸ್ಯ ನೀಲಕಂಠಯ್ಯ ಮಠದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಸಭೆಯಲ್ಲಿ ಪಾಲ್ಗೊಳ್ಳಲೆಂದು ಆಂಬುಲೆನ್ಸ್​ ಮೂಲಕ ಸ್ಥಳಕ್ಕೆ ಬಂದಿದ್ದರು.ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪಿಎಸ್​ಐ ಪ್ರವಿಣ ಗಂಗೋಳ ಅವರಿಗೆ ಮುಖ್ಯಕಾರ್ಯನಿರ್ವಾಹಕ ಅರ್ಜುನ ಭಂಗಿ, ಹಾಗೂ ಕಂಪ್ಯೂಟರ್​ ಆಪರೇಟರ್​ ಮಂಜುನಾಥ ತಿಗಡಿ ಅವರನ್ನು ಹುಡುಕಿಕೊಡುವಂತೆ ಪಿಕೆಪಿಎಸ್​ ಸದಸ್ಯರು ದೂರು ಸಲ್ಲಿಸಿದರು. ಗೌಡಪ್ಪ ನಾಡಗೌಡ, ಸಿದ್ದಪ್ಪ ಕಲಬಾಂವಿ, ಲಕ್ಷಿ$್ಮ ಆನಿಗೋಳ, ಅರ್ಜುನ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net