ಹೊಸಯರಗುದ್ರಿ ಪಿಕೆಪಿಎಸ್ ಗೆ ಅವಿರೋಧ ಆಯ್ಕೆ

IMG-20250105-WA0031.jpg
Published on

ಬೆಳಗಾವಿ: ಮೂಡಲಗಿ ತಾಲೂಕಿನ ಹೊಸಯರಗುದ್ರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ತಮ್ಮಣ್ಣಾ ಹೊರಟ್ಟಿ, ಉಪಾಧ್ಯಕ್ಷರಾಗಿ ಅಕ್ಕವಾ ಚಿಪ್ಪಲಕಟ್ಟಿ ಅವಿರೋಧವಾಗಿ ಆಯ್ಕೆಯಾದರು.

ಹೊಸಯರಗುದ್ರಿ ಗ್ರಾಮದ‌ ಪಿಕೆಪಿಎಸ್ ಕಾರ್ಯಾಲಯದಲ್ಲಿ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಅಶೋಕ ಸೊಬರದ ಘೋಷಿಸಿದರು.

ತದನಂತರ ಪಿಕೆಪಿಎಸ್ ಸಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ನಿರ್ದೇಶಕರಾದ ಸದಪ್ಪ ಉದ್ದಿನವರ(ನಾಯಕ), ಕೆಂಚಪ್ಪ ಪೂಜೇರಿ, ಸಂಜೀವರಡ್ಡಿ ಪಾಟೀಲ, ಶಂಕರೆಪ್ಪಾ ಮಜ್ಜಗಿ, ವೆಂಕಪ್ಪ ನಿಲ್ಲಪ್ಪಗೋಳ, ಬಸಪ್ಪಾ ಹುಗ್ಗಿ, ಇಂದ್ರವ್ವಾ ಲಕ್ಕಾರ, ಸದಾಪ್ಪ ಕೊಳ್ಯಾರ (ಮಾದರ), ಕೃಷ್ಣಪ್ಪ ಪೂಜೇರ, ಮಹಾಂತೇಶ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹೊಸಯರಗುದ್ರಿ ಪಿಕೆಪಿಎಸ್ ನೂತನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದ ಜಗದೀಶ್ ಶೆಟ್ಟರ್ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net