ಬುಕ್ ಆಫ್ ರೆಕಾರ್ಡ್ಸ್ ಕೀರ್ತಿಗೆ ಪಿಯೂಷ್ ಭಾಜನ

31
Published on

ಮೈಸೂರು: ನಗರದ ಶ್ರೀಶಾರದಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಪಿಯೂಷ್ ರಂಜನ್ ರಾವ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಕೀರ್ತಿಗೆ ಭಾಜನರಾಗಿದ್ದಾರೆ, ಕಣ್ಣು ಮುಚ್ಚಿ ಒಂದು ನಿಮಿಷದಲ್ಲಿ ಕಾರ್ಟ್ ವ್ಹೀಲ್‌ಗಳನ್ನು ಪ್ರದೇಶಿಸಿ ತಮ್ಮದೇ ಹೊಸ ದಾಖಲೆ ನಿರ್ಮಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. 8 ವರ್ಷದ ಪಿಯೂಷ್ ರಂಜನ್ ರಾವ್, 2024ರ ಡಿಸೆಂಬರ್ 31ರಂದು ಕಣ್ಣುಮುಚ್ಚಿ 48 ಕಾರ್ಟ್ ವ್ಹೀಲ್ ಗಳನ್ನು ಪ್ರದರ್ಶಿಸಿದ್ದರು. ವಿದ್ಯಾರ್ಥಿ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net