ಹೊಂಡ ಸ್ವಚ್ಛತೆಗೆ ಮುಂದಾದ ಗ್ರಾಪಂ

24 MYK 2
Published on

ಮಾಯಕೊಂಡ: ಹೋಬಳಿಯ ಅಣಬೇರು ಗ್ರಾಮದ ಮಧ್ಯಭಾಗದಲ್ಲಿರುವ ಹೊಂಡದ ಸ್ವಚ್ಛತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮುಂದಾಗಿದೆ.

ಹೊಂಡದ ಸುತ್ತಲೂ ಗಿಡಗಳು ಬೆಳೆದು ಬಳಸಲು ಯೋಗ್ಯವಲ್ಲದಂತಾಗಿದೆ. ಜತೆಗೆ ಚರಂಡಿ ನೀರು ಸೇರಿ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿರುವ ಗ್ರಾಮ ಪಂಚಾಯಿತಿ ಸ್ವಚ್ಛತಾ ಕಾರ್ಯಾಚರಣೆ ಪ್ರಾರಂಭಿಸಿದೆ. ಹೊಂಡದಲ್ಲಿರುವ ಕೊಚ್ಚೆ ನೀರನ್ನು ಮೋಟರ್ ನಿಂದ ಹೊರಗೆ ಹಾಕಿ ಹೂಳನ್ನು ತೆಗೆಸಿ ಸಂಪೂರ್ಣ ಸ್ವಚ್ಛಗೊಳಿಸಲಾಗುವುದು ಎಂದು ಗ್ರಾಪಂ ಪಿಡಿಒ ಹಾಗೂ ಸದಸ್ಯರು ತಿಳಿಸಿದ್ದಾರೆ.

ವಿಜಯವಾಣಿ ವರದಿಯಿಂದ ಹೊಂಡದ ಸ್ವಚ್ಛತೆಗೆ ಚಾಲನೆ ದೊರಕಿರುವುದು ಸಂತಸ ತಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕಾರ್ಯಾಚರಣೆ ವೇಳೆ ಪಿಡಿಒ ವಿದ್ಯಾವತಿ, ಗ್ರಾಪಂ ಸದಸ್ಯರಾದ ಜಿ.ಎಂ. ಅನಿಲ್ ಕುಮಾರ್, ಬುಡೆನ್ ಸಾಬ್, ಮಹದೇವಪ್ಪ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net