‘ಪಿರ್ಕಿಲು’ ತುಳು ಸಿನಿಮಾ ಕರಾವಳಿಯಾದ್ಯಂತ ತೆರೆಗೆ

mng--26 may Pirkilu
Published on

ಮಂಗಳೂರು: ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ, ಶಿವಪ್ರಸಾದ್ ಇಜ್ಞಾವು ನಿರ್ಮಾಣದಲ್ಲಿ ಹೆಚ್.ಡಿ ಆರ್ಯ ನಿರ್ದೇಶನದಲ್ಲಿ ತಯಾರಾದ ‘ಪಿರ್ಕಿಲು’ ತುಳು ಸಿನಿಮಾ ಶುಕ್ರವಾರ ಭಾರತ್ ಮಾಲ್ ನ ಬಿಗ್ ಸಿನಿಮಾಸ್‌ನಲ್ಲಿ ಬಿಡುಗಡೆಗೊಂಡಿತು.


ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ತುಳು ಸಿನಿಮಾಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಎಷ್ಟು ಮುಖ್ಯವೋ, ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರ ಪ್ರೋತ್ಸಾಹ, ಸಹಕಾರವೂ ಅಷ್ಟೇ ಮುಖ್ಯ. ಸಿನಿಮಾಗಳಲ್ಲಿ ಅಭಿನಯಿಸಿದ ಕಲಾವಿದರು ಸಿನಿಮಾ ಬಿಡುಗಡೆಯ ಸಂದರ್ಭದಲ್ಲೂ ನಿರ್ಮಾಪಕರೊಂದಿಗೆ ಪ್ರಚಾರ ಸಂದರ್ಭದಲ್ಲಿ ಸಹಕರಿಸಿದರೆ ಒಳ್ಳೆಯದು ಎಂದವರು ತಿಳಿಸಿದರು.


ನಿರ್ಮಾಪಕ ಪಮ್ಮಿ ಕೊಡಿಯಾಲ್ ಬೈಲ್, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ನಿರ್ದೇಶಕ ಹೆಚ್.ಡಿ. ಆರ್ಯ, ನಿರ್ಮಾಪಕರಾದ ಸತೀಶ್ ಪೆರ್ನೆ, ಶಿವಪ್ರಸಾದ್ ಇಜ್ಜಾವು, ನಾಯಕಿ ನಟಿ ಲತಾ ಎಸ್.ಗೌಡ ಉಪಸ್ಥಿತರಿದ್ದರು. ಚೈತನ್ಯ ಕಾರ್ಯಕ್ರಮ ನಿರ್ವಹಿಸಿದರು.


ಪಿರ್ಕಿಲು ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಬಾರತ್ ಸಿನಿಮಾಸ್, ಐನಾಕ್ಸೃ್, ಪಡುಬಿದ್ರಿಯಲ್ಲಿ ಭಾರತ್ ಸಿನಿಮಾ, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಪುತ್ತೂರಿನಲ್ಲಿ ಭಾರತ್ ಸಿನಿಮಾ, ಮೂಡುಬಿದಿರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಸುಳ್ಯದಲ್ಲಿ ಸಂತೋಷ್, ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾ ಮೊದಲಾದ ಕಡೆಗಳಲ್ಲಿ ತೆರೆಕಂಡಿದೆ.


ಪಿರ್ಕಿಲು ಸಿನಿಮಾಕ್ಕೆ ಮೂರು ಹಂತದಲ್ಲಿ ಸುಳ್ಯ, ಪುತ್ತೂರು, ಮಂಗಳೂರು, ಉಪ್ಪಿನಂಗಡಿಯಲ್ಲಿ 29 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಪಿರ್ಕಿಲು ತುಳು ಸಿನಿಮಾ ಹಾಸ್ಯ ಮತ್ತು ಕೌಟುಂಬಿಕ ಮನರಂಜನೆಯ ಚಿತ್ರ. ಪಿರ್ಕಿಲು ಎಂದು ಊರಿನ ಜನರಿಂದ ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರಗಳನ್ನು ಸೃಷ್ಟಿ ಮಾಡುತ್ತಾರೆ ಎಂಬುದನ್ನು ಹಾಸ್ಯಭರಿತವಾಗಿ ಸಂದೇಶ ಸಾರುವುದೇ ಚಿತ್ರದ ಒನ್ ಲೈನ್ ಸ್ಟೋರಿ ಆಗಿದೆ. ಎಲ್ಲ ವರ್ಗದ ಜನರು ಇಷ್ಟ ಪಡುವ ಕತೆಯನ್ನು ಹಾಸ್ಯಭರಿತವಾಗಿ ಹೆಣೆಯಲಾಗಿದೆ. ನಿರ್ದೇಶಕ ಹೆಚ್.ಡಿ. ಆರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಬಿತ ತುಳು ಸಂಭಾಷಣೆ ತರ್ಜುಮೆ ಮಾಡಿದ್ದಾರೆ.


ತಾರಾ ಬಳಗದಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸ ರಾಜ ಬೋಜರಾಜ ವಾಮಂಜೂರು, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿಸೋಜ, ಲತಾ ಎಸ್.ಗೌಡ ಅಭಿನಯಿಸಿದ್ದಾರೆ ಎಂದರು.


ತಾರಾಗಣದಲ್ಲಿ ಸುಮಿತ್ರ ರೈ, ಅಮಿತ, ನವೀನ್ ಬೋಂದೇಲ್, ಅರ್ಪಣ್, ಅನಿಲ್ ರೈ, ರಂಜಿತ್ ರೈ, ತಿಮ್ಮಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಮೊಹನ್, ಸೋನಿ ಮೊದಲಾದವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net