

ಮಂಗಳೂರು: ಕರಾವಳಿ ಸಿನಿಮಾಸ್ ಲಾಂಛನದಲ್ಲಿ ಸತೀಶ್ ಪೆರ್ನೆ, ಶಿವಪ್ರಸಾದ್ ಇಜ್ಞಾವು ನಿರ್ಮಾಣದ ‘ಪಿರ್ಕಿಲು’ ತುಳು ಸಿನಿಮಾ ಮೇ 26 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.
ಪಿರ್ಕಿಲು ಸಿನಿಮಾ ದಕ್ಷಿಣ ಮತ್ತು ಉಡುಪಿಯ ಬಹುತೇಕ ಸಿನಿಮಾ ಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಸಿನಿಮಾ ಮೂರು ಹಂತದಲ್ಲಿ 29 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ದೊರೆತಿದೆ. ಪಿರ್ಕಿಲು ತುಳು ಸಿನಿಮಾ ಹಾಸ್ಯ ಮತ್ತು ಕೌಟುಂಬಿಕ ಮನರಂಜನೆಯ ಚಿತ್ರವಾಗಿದ್ದು, ಎಲ್ಲ ವರ್ಗದ ಜನರು ಇಷ್ಟ ಪಡುವ ಕತೆಯನ್ನು ಹಾಸ್ಯಭರಿತವಾಗಿ ಹೆಣೆಯಲಾಗಿದೆ ಎಂದು ನಿರ್ದೇಶಕ ಹೆಚ್.ಡಿ. ಆರ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಬಿತ ತುಳು ಸಂಭಾಷಣೆ ತರ್ಜುಮೆ ಮಾಡಿದ್ದಾರೆ. ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನವರಸ ರಾಜ ಬೋಜರಾಜ ವಾಮಂಜೂರು, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ ಪ್ರಮುಖ ಪಾತ್ರದಲ್ಲಿದ್ದಾರೆ. ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿಸೋಜ, ಲತಾ ಎಸ್.ಗೌಡ ಅಭಿನಯಿಸಿದ್ದಾರೆ. ತಾರಾಗಣದಲ್ಲಿ ಸುಮಿತ್ರ ರೈ, ಅಮಿತ, ನವೀನ್ ಬೋಂದೇಲ್, ಅರ್ಪಣ್, ಅನಿಲ್ ರೈ, ರಂಜಿತ್ ರೈ, ತಿಮ್ಮಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಮೋಹನ್, ಸೋನಿ ಮೊದಲಾದವರಿದ್ದಾರೆ ಎಂದರು.
ನಟರಾದ ಸುದೇಶ್ , ಅಲಿಶಾ, ಸತೀಶ್ ಪೆರ್ನೆ, ಲತಾ ಎಸ್. ಗೌಡ ಉಪಸ್ಥಿತರಿದ್ದರು.