ಪಿರಿಯಾಪಟ್ಟಣ ಕನ್ನಡ ಜ್ಯೋತಿ ರಥ ಸಂಚಾರ

RemasterDirector_1a5c03258
ಪಿರಿಯಾಪಟ್ಟಣದ ಕನ್ನಂಬಾಡಿಯಮ್ಮ ದೇವಾಲಯದ ಬಳಿ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಗೆ ತಹಸೀಲ್ದಾರ್ ನಿಸರ್ಗಪ್ರಿಯ ಚಾಲನೆ ನೀಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ನವೀನ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಮಹದೇವರಾವ್, ತಾಪಂ ಇಒ ಸುನೀಲ್ ಕುಮಾರ್, ಪಾಂಡುರಂಗ, ನಿರಂಜನ್, ಬಿರ್ಲಾ ಹರೀಶ್ ಇತರರು ಇದ್ದರು.
Published on

ಪಿರಿಯಾಪಟ್ಟಣ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥ ಭಾನುವಾರ ಪಟ್ಟಣದಲ್ಲಿ ಸಂಚರಿಸಿತು.

ಶನಿವಾರ ತಾಲೂಕಿನ ಕಂಪಲಾಪುರಕ್ಕೆ ಆಗಮಿಸಿದ್ದ ರಥವನ್ನು ತಾಲೂಕು ಆಡಳಿತದ ವತಿಯಿಂದ ಸ್ವಾಗತಿಸಲಾಗಿತು. ಭಾನುವಾರ ಬೆಳಗ್ಗೆ ಪಟ್ಟಣದ ಕನ್ನಂಬಾಡಿಯಮ್ಮ ದೇವಾಲಯದ ಬಳಿ ತಹಸೀಲ್ದಾರ್ ನಿಸರ್ಗಪ್ರಿಯ ಅವರ ಸಮ್ಮುಖದಲ್ಲಿ ರಥದ ದೀಪ ಹಚ್ಚಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ರಥ ಪಟ್ಟಣ ಬಿ.ಎಂ.ರಸ್ತೆಯಲ್ಲಿ ಬಸವೇಶ್ವರ ವೃತ್ತದ ವರೆಗೆ ಸಂಚರಿಸಿತು. ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್ ಕುಮಾರ್, ತಾಪಂ ಇಒ ಸುನೀಲ್ ಕುಮಾರ್, ಕಂದಾಯ ನಿರೀಕ್ಷಕ ಪಾಂಡುರಂಗ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಮಹದೇವರಾವ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಬಿರ್ಲಾ ಹರೀಶ್, ನಿರಂಜನ್, ಶ್ರೀನಿವಾಸ್, ಮೋಹನ್, ಪ್ರದೀಪ್ ಇದ್ದರು. ಬಳಿಕ ರಥಯಾತ್ರೆ ಹಿಟ್ನೆಹೆಬ್ಬಾಗಿಲು, ಸೀಗೂರು, ಈಚೂರು, ಮೂಲಕ ಬೆಟ್ಟದಪುರ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net