ಪೀರಾಪುರ-ಅಮಲಿಹಾಳ ರಸ್ತೆ ಕಾಮಗಾರಿಗೆ ಚಾಲನೆ

Pirapura-Amalihala road work launched
ತಾಳಿಕೋಟೆ ತಾಲೂಕಿನ ಪೀರಾಪುರ ಗ್ರಾಮದಿಂದ ಅಮಲಿಹಾಳದವರೆಗೆ ರಸ್ತೆ ಕಾಮಗಾರಿಗೆ ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ಶ್ರೀಗಳು ಪೂಜೆ ನೆರವೇರಿಸಿ ಚಾಲನೆ ನೀಡಿದರು. ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ), ಬಸನಗೌಡ ವಣಕ್ಯಾಳ, ಮಡುಸಾಹುಕಾರ ಬಿರಾದಾರ ಇತರರಿದ್ದರು.
Published on

ತಾಳಿಕೋಟೆ: ರಾಜಕಾರಣಿಗಳು ಕೇವಲ ಅಧಿಕಾರ ಅನುಭವಿಸುವುದಲ್ಲ. ಜನರ ಭಾವನೆ ಅರಿತು ಕೆಲಸ ಮಾಡಬೇಕು. ಅಂಥ ಶಕ್ತಿ ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಅವರಲ್ಲಿ ಅಡಗಿದೆ ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಹೇಳಿದರು.

ತಾಲೂಕಿನ ಪೀರಾಪುರದಿಂದ ಅಮಲಿಹಾಳ ಗ್ರಾಮದವರೆಗೆ ಎರಡು ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಮಾತನಾಡಿ, ನಾನು ಖಾಸ್ಗತೇಶ್ವರ ಮಠದ ಭಕ್ತ. ಶ್ರೀಗಳ ಹಾಗೂ ಜನರ ಆಶಿರ್ವಾದದಿಂದ ಶಾಸಕನಾಗಿ ಜನರ ಸೇವೆ ಮಾಡುತ್ತಿದ್ದೇನೆ. ರಸ್ತೆಯಿಲ್ಲದೆ ಅಮಲಿಹಾಳ ಗ್ರಾಮದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತು ಶ್ರೀಗಳು ನನ್ನ ಗಮನಕ್ಕೆ ತಂದ್ದಿದ್ದರು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ, ತಾಲೂಕು ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಮುಖಂಡರಾದ ಎಂ.ಎಂ. ಪಾಟೀಲ, ರಾಜುಗೌಡ ಕೊಳೂರ, ಪ್ರಭುಗೌಡ ಪಾಟೀಲ, ಲಿಂಗನಗೌಡ ತುಂಬಗಿ, ಈಸುಗೌಡ ನಾಡಗೌಡ, ವೀರೇಶ ಕಾರನೂರ, ಸಿದ್ದನಗೌಡ ಲಕ್ಕುಂಡಿ, ಸಾಹೇಬಗೌಡ ಬೊಮ್ಮನಹಳ್ಳಿ, ಅರವಿಂದ ಹಾಲಣ್ಣವರ, ಹುಸೇನಿ ವಕೀಲ, ಮಾಳಪ್ಪ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net