ಕೊಡತಗೇರಿ ಬಳಿ ಪೈಪ್‌ಲೈನ್ ಒಡೆದು ಕಾರಂಜಿಯಂತೆ ಚಿಮ್ಮಿದ ನೀರು

FOUNTAIN
ಕಾರಂಜಿಯಂತೆ ಚಿಮ್ಮುತ್ತಿರುವ ನೀರು.
Published on

ಹನುಮಸಾಗರ: ಕೊಡತಗೇರಿ ಬಳಿ ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್ ಸೋರಿಕೆಯಾಗಿ ಕೆರೆಯಂಗಳ ಸೇರಬೇಕಾದ ಕೃಷ್ಣಾ ನದಿ ನೀರು ಕಾರಂಜಿಯಂತೆ ಜಿಗಿದು, ಅಪಾರ ಪ್ರಮಾಣದಲ್ಲಿ ಭಾನುವಾರ ತಡರಾತ್ರಿ ವ್ಯರ್ಥವಾಗಿದೆ.

ಕೆರೆಗೆ 3.2 ಎಂಸಿಎಫ್‌ಟಿ ನೀರು ಹರಿಸಲು ಪ್ರಾಯೋಗಿಕ ಪರೀಕ್ಷೆ ಮಾಡಲಾಗಿತ್ತು. ಕೆರೆ ಪಕ್ಕದಲ್ಲಿ ಅಳವಡಿಸಿದ್ದ ವಾಲ್ವ್ ಮೂಲಕ ಅಪಾರ ಪ್ರಮಾಣದ ನೀರು ಹರಿದು ಹೊಲಗಳಿಗೆ ಹೋಗುವ ರಸ್ತೆಯಲ್ಲಿ ಹರಿದು ಮಾರ್ಗವೇ ಹಾಳಾಗಿದೆ. ‘ಪ್ರಾಯೋಗಿಕ ಪರೀಕ್ಷೆಗೆ ನೀರು ಬಿಟ್ಟ ಸಂದರ್ಭ ಯಾರೋ ಕೆಲವರು ರಾತ್ರಿವೇಳೆ ವಾಲ್ವ್‌ನ ನಟ್-ಬೋಲ್ಟ್ ಬಿಚ್ಚಲು ಹೋಗಿದ್ದಾರೆ.

ಅದಕ್ಕಾಗಿ ನೀರು ಸೋರಿಕೆಯಾಗಿದೆ. ಪೈಪ್‌ಲೈನ್‌ನಲ್ಲಿ ಸಮಸ್ಯೆ ಇಲ್ಲ. ಸಮಸ್ಯೆ ಸರಿಮಾಡಲಾಗುವುದು ಎಂದು ಕೆರೆ ತುಂಬಿಸುವ ಯೋಜನೆಯ ಸಹಾಯಕ ಇಂಜಿನಿಯರ್ ಅಶೋಕ ನಾಯ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net