ಹಸಿರು ಕ್ರಾಂತಿಯ ಹರಿಕಾರರು

Pioneers of the Green Revolution
Pioneers of the Green Revolution
Published on

ಗುಳೇದಗುಡ್ಡ: ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಮಾಡಿ, ದೇಶವನ್ನು ಹಸಿವಿನಿಂದ ಮುಕ್ತಗೊಳಿಸುವ ಸಂಕಲ್ಪತೊಟ್ಟ ಡಾ. ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ತಹಸೀಲ್ದಾರ್ ಮಂಗಳಾ ಎಂ. ಹೇಳಿದರು.

ಪಟ್ಟಣದ ತಾಲೂಕು ಆಡಳಿತ, ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡದ್ದ ಡಾ. ಬಾಬು ಜಗಜೀವನರಾಮ್ 118ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಜಗಜೀವನರಾಮ್ ಅವರ ತತ್ವಾದರ್ಶ ಯುವ ಪೀಳಿಗೆ ಅಳವಡಿಕೊಳ್ಳಬೇಕು ಎಂದರು.

ಸ್ವಾತಂತ್ರ್ಯದ ನಂತರ ಭಾರತದಲ್ಲಿ ಆಳವಾಗಿ ಬೇರೂರಿದ್ದ ಮೇಲು-ಕೀಳು, ತಾರತಮ್ಯ, ಅಸ್ಪಶ್ಯತೆ, ಜಾತಿ ವ್ಯವಸ್ಥೆ, ಮೌಢ್ಯದ ಮನೋಭಾವ ತೊಡೆದು ಹಾಕಲು ಡಾ.ಬಾಬು ಜಗಜೀವನರಾಮ್ ಪ್ರಮುಖ ಪಾತ್ರ ವಹಿಸಿದರು ಎಂದರು.

ನಿವೃತ್ತ ಶಿಕ್ಷಕ ವಸಂತ ಚವಾಣ ಮಾತನಾಡಿ, ಡಾ. ಬಾಬು ಜಗಜೀವನರಾಮ್ ಸಮಬಾಳು, ಸಮಪಾಲು ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಹಗಲಿರುಳು ಶ್ರಮಿಸಿದ ನಾಯಕ ಎಂದರು.

ವಿಶೇಷ ತಹಸೀಲ್ದಾರ್ ಮಹೇಶ ಗಸ್ತೆ, ಪುರಸಭೆ ಉಪಾಧ್ಯಕ್ಷ ರಾಜು ಹೆಬ್ಬಳ್ಳಿ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಸಮಾಜದ ಮುಖಂಡರಾದ ಯಮನಪ್ಪ ದಳಪತಿ, ವೈ.ಆರ್. ಹೆಬ್ಬಳ್ಳಿ, ಪರಶುರಾಮ ಮಾದರ, ಶಂಕ್ರಪ್ಪ ಹುಲಮನಿ, ಪಕೀರಪ್ಪ ತಳವಾರ, ರೆಡ್ಡಿ ನಡುವಿನಮನಿ, ರಮೇಶ ಗಚ್ಚಿನಮನಿ, ಹಿರಿಯಪ್ಪ ಮಾದರ, ಈರಣ್ಣ ಬಂಡಿವಡ್ಡರ, ದ್ಯಾಮಣ್ಣ ಗೌಡರ, ಪುರಸಭೆ ಸದಸ್ಯ ಯಲ್ಲಪ್ಪ ಮನ್ನಿಕಟ್ಟಿ, ಶ್ರೀಕಾಂತ ಹುನಗುಂದ, ಮಹ್ಮದರಫೀಕ್ ಮಕಾಂದಾರ, ಬಸವರಾಜ ಹಲಕುರ್ಕಿ, ಟಿ.ಎಂ. ಚೇಕರೆಡ್ಡಿ, ಆನಂದ ಮಬ್ರಂಕರ, ಆರ್.ಎನ್. ರಂಜಾನ್, ಆನಂದ ಗೌಡರ, ಸುರೇಶ ಜಾಧವ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net