ಬ್ಯಾಂಕಿಂಗ್​ನಲ್ಲಿ ಪಯೋನಿಯರ್​ ಸಾಧನ

30 Jaggu 8
Published on

ಬೆಳಗಾವಿ: ಪಯೋನಿಯರ್​ ಅರ್ಬನ್​ ಬ್ಯಾಂಕ್​ ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ ಎಂದು ಮೇಯರ್​ ಮಂಗೇಶ್​ ಪವಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮೀಪದ ವಡಗಾವಿಯ ಯಳ್ಳೂರು ರಸ್ತೆಯ ನಾಝರ್​ ಕ್ಯಾಂಪ್​ನಲ್ಲಿ ಬುಧವಾರ ಪಯೋನಿಯರ್​ ಅರ್ಬನ್​ ಬ್ಯಾಂಕ್​ನ 7ನೇ ಶಾಖೆ ಉದ್ಘಾಟಿಸಿ ಮಾತನಾಡಿದರು. ಪಯೋನಿಯರ್​ ಬ್ಯಾಂಕ್​ ತನ್ನದೇ ಆದ ಸಂಪ್ರದಾಯ ಹೊಂದಿದೆ. ನವಹಿಂದ್​ ಸೊಸೈಟಿ ಅಧ್ಯ ಪ್ರಕಾಶ ಅಷ್ಟೇಕರ ಮಾತನಾಡಿ, ಪಯೋನಿರ್​ ಬ್ಯಾಂಕ್​ನಿಂದ ಪ್ರೇರಿತರಾಗಿ ಮರಾಠ ಬ್ಯಾಂಕ್​, ತುಕಾರಾಮ್​ ಬ್ಯಾಂಕ್​ ನಂತರ ನಮ್ಮ ನವಹಿಂದ್​ ಸೊಸೈಟಿಯಂತಹ ಅನೇಕ ಸಂಸ್ಥೆಗಳು ತಳಮಟ್ಟದಿಂದ ಜನರ ಜೀವನ ಸುಧಾರಿಸುವಲ್ಲಿ ಆರ್ಥಿಕ ನೆರವು ನೀಡಿವೆ. ಈ ಬ್ಯಾಂಕ್​ಗಳಿಂದಾಗಿ ಅನೇಕ ಉದ್ಯಮಿಗಳು ಹೊರಹೊಮ್ಮಿದ್ದಾರೆ. ಬ್ಯಾಂಕ್​ನ ಅನೇಕ ನಿರ್ದೇಶಕರು ಕಾಲನಂತರ ಮೇಯರ್​ ಮತ್ತು ಶಾಸಕರಾದರು ಎಂದರು. ಕ್ರೆಡಾಯಿ ಅಧ್ಯ ಯುವರಾಜ ಹುಲಜಿ ಮಾತನಾಡಿ, ಪಯೋನಿರ್​ ಬ್ಯಾಂಕ್​ ಅನೇಕ ಉದ್ಯಮಿಗಳು ಮತ್ತು

ಬಿಲ್ಡರ್​ಗಳನ್ನು ಪ್ರೋತ್ಸಾಹಿಸಿದ್ದರಿಂದಲೇ ಅವರ ವ್ಯವಹಾರಗಳು ಯಶಸ್ವಿಯಾಯಿತು ಮತ್ತು ಬ್ಯಾಂಕ್​ ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂದರು.

ಮಾಜಿ ಶಾಸಕ ಸಂಜಯ ಪಾಟೀಲ, ಪಯೋನಿರ್​ ಬ್ಯಾಂಕ್​ ಅಧ್ಯಕ್ಷ ಪ್ರದಿಪ ಅಷ್ಟೇಕರ ಅವರ ನಾಯಕತ್ವದಿಂದಾಗಿ ಬ್ಯಾಂಕ್​ ಪ್ರಗತಿಯಲ್ಲಿದೆ ಎಂದರು.

ಬ್ಯಾಂಕ್​ನ ನಿರ್ವಹಣಾ ಮಂಡಳಿ ಅಧ್ಯ ಅನಂತ ಲಾಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಕಾರ ಸಂಗಳ ಉಪ ನಿಬಂಧಕ ರವೀಂದ್ರ ಪಾಟೀಲ, ಪಾಲಿಕೆ ಸದಸ್ಯರಾದ ಸಾರಿಕಾ ಪಾಟೀಲ, ಗಿರೀಶ ಧೋಂಗಡಿ, ಮಾಜಿ ಸದಸ್ಯ ಮನೋಹರ ಹಲಗೇಕರ, ಮಾಜಿ ಮೇಯರ್​ ಅಪ್ಪಾಸಾಹೇಬ ಪೂಜಾರಿ, ರತನ ಮಾಸೇಕರ, ಸುರೇಶ ರೆಡೆಕರ, ಬಿಲ್ಡರ್​ಗಳಾದ ಅನಂತ ಪಾಟೀಲ, ಆಧಾರ ಸೊಸೈಟಿ ಅಧ್ಯ ಸುಭಾಷ ದೇಸಾಯಿ, ಧನಶ್ರೀ ಸೊಸೈಟಿ ಅಧ್ಯ ಶಿವಾಜಿ ಪಾವಲೆ, ಮಹಾರಾಷ್ಟ್ರ ಪ್ರೌಢಶಾಲೆ ಅಧ್ಯೆ ಲೀಲಾ ಮೆನಸೆ, ಬ್ರಹ್ಮಲಿಂಗ್​ ಸೊಸೈಟಿ ಅಧ್ಯ ನೇತಾಜಿ ಗೋರಲ, ಪ್ರಿಯದರ್ಶಿನಿ ಸೊಸೈಟಿಯ ಮಾಧುರಿ ಪಾಟೀಲ, ಎಪಿಎಂಸಿ ಮಾಜಿ ಸದಸ್ಯ ಮಹೇಶ ಜುವೇಕರ, ಬೇಕರ್ಸ್​ ಸೊಸೈಟಿಯ ರಾಜಾರಾಂ ಸೂರ್ಯವಂಶಿ, ತಾಪಂ ಮಾಜಿ ಸದಸ್ಯ ರಾವಜಿ ಪಾಟೀಲ, ಇಂಜಿನಿಯರ್​ ಸುನೀಲ್​ ಚೌಗುಲೆ, ಸಾಮಾಜಿಕ ಕಾರ್ಯಕರ್ತ ಮಧುಕರ ವೆಸನೆ, ಶಿವಮಂದಿರ ಟ್ರಸ್ಟ್​ನ ಕಿರಣ ಕರಂಬಳಕರ ಹಾಗೂ ಬ್ಯಾಂಕ್​ ಉಪಾಧ್ಯೆ ಸುವರ್ಣಾ ಶಹಾಪುರಕರ, ನಿರ್ದೇಶಕರಾದ ಗಜಾನನ ಪಾಟೀಲ, ಯಲ್ಲಪ್ಪ ಬೆಳಗಾಂವಕರ, ಗಜಾನನ ಠೋಕನೇಕರ, ಮಲ್ಲೆಶ ಚೌಗುಲೆ, ಮಾರುತಿ ಸೀಗಿಹಳ್ಳಿ, ಶ್ರೀಕಾಂತ ದೇಸಾಯಿ, ಬಸವರಾಜ ಇಟಿ, ರೋಹನ ಚೌಗುಲೆ, ನಿತಿನ್​ ಹಿರೇಮಠ, ಾನೇಶ್ವರ ಸಾಯಿನೇಕರ, ಕಮಲೇಶ ಮಾಯಾನಾಚೆ,

ಸಿಇಒ ಅನಿತಾ ಮುಲ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net