ಹಸಿರು ಕ್ರಾಂತಿ ಹರಿಕಾರ

Pioneer of the Green Revolution
Pioneer of the Green Revolution
Published on

ವಿಜಯಪುರ: ಡಾ. ಬಾಬು ಜಗಜೀವನರಾಮ್​ ಅವರು ಅಸ್ಪಶ್ಯತೆ ನಿವಾರಣೆ ಹೋರಾಟದ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಹರಿಕಾರ ಎಂದು ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಬಣ್ಣಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಮ್​ ಅವರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಭಾರತದ ಉಪ ಪ್ರಧಾನಿಗಳಾಗಿ ಅವರು ದೇಶಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.

ಮುಖಂಡರಾದ ಅಬ್ದುಲ್​ ಹಮೀದ್​ ಮುಶ್ರೀಫ್​, ಕೆ.ಎಫ್​. ಅಂಕಲಗಿ, ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಕಾಲೇಬಾಗ, ಬ್ಲಾಕ್​ ಅಧ್ಯಕ್ಷೆ ಆರತಿ ಶಹಾಪೂರ, ಶಾಹಜಾನ ಮುಲ್ಲಾ, ಗಂಗಾಧರ ಸಂಬಣ್ಣಿ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಂ. ಮುಲ್ಲಾ, ವಸಂತ ಹೊನಮೋಡೆ, ಶಮೀಮಾ ಅಕ್ಕಲಕೋಟ, ಭಾರತಿ ಹೊಸಮನಿ, ರುಬೀನಾ ಹಳ್ಳೂರ, ಅಶ್ಪಾಕ ಮನಗೂಳಿ, ಶಫೀಕ ಬಗದಾದಿ, ಪರಶುರಾಮ ಹೊಸಮನಿ, ಮೋಹನ ದಳವಾಯಿ, ಸಂತೋಷ ಬಾಲಗಾವಿ, ಶರಣಪ್ಪ ಯಕ್ಕುಂಡಿ, ಕೃಷ್ಣಾ ಲಮಾಣಿ, ದಿಲೀಪ ಪ್ರಭಾಕರ, ಎಂ.ಎಂ. ಹಿರೇಮಠ, ಎಂ.ಬಿ. ಶೇಖ, ಸುಂದರಪಾಲ ರಾಠೋಡ, ಬಿ.ಎಂ. ಮಕ್ತೇದಾರ, ವೀರೇಶ ಕಲಾಲ, ಸರ್ಪರಾಜ ಮಿರ್ದೆ, ಅಲ್ಲಾಬಕ್ಷ ಬಡೇರ, ಅನ್ನಪೂರ್ಣ ಬೀಳಗಿಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net