

ದೇವದುರ್ಗ: ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ಅ.7ರವರೆಗೆ ಕೈಗೊಳ್ಳುವ ಜಾತಿ ಸಮೀಕ್ಷೆಯಲ್ಲಿ ಪಿಂಜಾರ/ನದಾಫ್ ಸಮಾಜದವರು ಸಮರ್ಪಕ ಮಾಹಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಪಿಂಜಾರ, ನದಾಫ್ ಸಂಘದ ಜಿಲ್ಲಾಧ್ಯಕ್ಷ ಮೌಲಸಾಬ್ ಗಣದಿನ್ನಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಮಾಜದ ಜನರು ಧರ್ಮದ ಕಾಲಂನದಲ್ಲಿ ಇಸ್ಲಾಂ ಎಂದು ಜಾತಿ ಕಾಲಂನದಲ್ಲಿ ಪಿಂಜಾರ ಅಥವಾ ನದಾಫ್ ಎಂದು ಬರೆಯಿಸಬೇಕು. ಕುಲಕಸುಬು ಕಾಲಂನಲ್ಲಿ ಹತ್ತಿ ಶುದ್ಧಗೊಳಿಸುವುದು ಎಂದು ನಮೂದು ಮಾಡಬೇಕು.
ಆ ಮೂಲಕ ಸರ್ಕಾರ ಕೆಟಗರಿ1ರಲ್ಲಿ ಕಲ್ಪಿಸಿದ ಮೀಸಲು ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದರು. ಪಿಂಜಾರ-ನದಾಫ್ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಹೀಗಾಗಿ ಹಿಂದಿನ ಸರ್ಕಾರ ನಮ್ಮ ಸಮಾಜವನ್ನು ಕೆಟಗರಿ1ರಲ್ಲಿ ಸೇರಿಸಿ ಮೀಸಲು ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಮಾಜದ ಜನರು ಜಾತಿಗಣತಿಯಲ್ಲಿ ಪಾಲ್ಗೊಂಡು ಮಾಹಿತಿ ನೀಡಬೇಕು ಎಂದರು.
ತಾಲೂಕು ಅಧ್ಯಕ್ಷ ಹಸನ್ ಸಾಬ್ ರಾಮನಾಳ, ಮೌಲಾಸಾಬ್ ಜಾಲಹಳ್ಳಿ, ಕಾಸಿಂಸಾಬ್ ನಿಲವಂಜಿ, ಅಜಿಮೌಲಾ ಅರಕೇರಾ, ಖಾದರ್‌ಸಾಬ್ ಗಲಗ, ಭಾವಸಾಬ್ ಹಿರೆರಾಕುಪ್ಪಿ, ಅಲಿಸಾಬ್ ಕರಿಗುಡ್ಡ ಇತರರಿದ್ದರು.