ಡಿಸಿಗೆ ಪಿಂಜಾರ ಸಮುದಾಯದ ಮನವಿ

CTD 1 MANAVI.jpg NN
Published on

ಚಿತ್ರದುರ್ಗ: ನದಾಫ್/ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ರಾಜ್ಯ ನದಾಫ್/ಪಿಂಜಾರ ಅಭಿವೃದ್ಧಿ ಚಿತ್ರ ದುರ್ಗ ತಾಲೂಕು ಘಟಕದ ಪ್ರಮುಖರು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಆರ್ಥಿಕ, ಸಾಮಾಜಿಕ,ಶೈಕ್ಷಣಿಕ,ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಪಿಂಜಾರ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಯಲ್ಲಿದ್ದು,ಕರ್ನಾಟ ಕದಲ್ಲಿ ಈ ಸಮುದಾಯ ಅತ್ಯಂತ ಹಿಂದುಳಿದಿದೆ.
ಪಿಂಜಾರ ಸಮುದಾಯದ ಜನರು ಹಾಸಿಗೆ ಹೊಲಿಯುವುದು,ಗುಡಾರಗಳ ನೇಯ್ಗೆ,ಹಗ್ಗ ತಯಾರಿಕೆ ವೃತ್ತಿಯಲ್ಲಿ ತೊಡಗಿ ಅಲೆ ಮಾ ರಿಗಳಂತೆ ಜೀವನ ಸಾಗಿಸುತ್ತಿದ್ದಾರೆ. ಈವರೆವಿಗೂ ಈ ಸಮುದಾಯದಲ್ಲಿ ಯಾರೊಬ್ಬ ಉನ್ನತ ಮಟ್ಟದ ಅಧಿಕಾರಿಗಳಾಗಿಲ್ಲ. ಆದ್ದ ರಿಂದ ಸಮುದಾಯದ ಸರ್ವಾಂಗೀಣ ಏಳಿಗೆಗಾಗಿ ಪಿಂಜಾರ/ನದಾಫ್ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿ ಸುತ್ತಿದ್ದರೂ ಪ್ರಯೋಜನವಾಗಿಲ್ಲವೆಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ಆದ್ದರಿಂದ ಈಗಲಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಮಾಡಿದರು. ಹುಸೇನ್‌ಪೀರ್,ಮಹಮದ್‌ಆಲಿ,ಅಲಿಪೀರ್, ದಾದವಲಿ,ರಶೀದ್‌ಸಾಬ್,ಹಾಜಿ ಆರ್.ದಾದಾಪೀರ್,ಶಬ್ಬೀರ್,ಭಾಷ,ಷರಿಫಾಬಿ, ಅಕ್ಬರ್,ಹಸನ್‌ಸಾಬ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net