ಉಪ್ಪಿನಂಗಡಿಯಲ್ಲಿ ಪಿಂಡ ಪ್ರದಾನ : ನೇತ್ರಾವತಿ-ಕುಮಾರಧಾರಾ ನದಿ ಸಂಗಮದಲ್ಲಿ ಭಕ್ತರಿಂದ ಸೇವೆ

Upp_Pinda Pradana
Published on

ಉಪ್ಪಿನಂಗಡಿ: ಗತಿಸಿದ ಹಿರಿಯರ ಮೋಕ್ಷಪ್ರಾಪ್ತಿಗಾಗಿ ಮಹಾಲಯ ಅಮಾವಾಸ್ಯೆಯ ಬುಧವಾರ ಸಾವಿರಾರು ಭಕ್ತರು ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾರಾ ನದಿ ಸಂಗಮ ತಟದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಪಿಂಡ ಪ್ರದಾನ, ತಿಲಹೋಮಾದಿ ಕಾರ್ಯ ನೆರವೇರಿಸಿದರು.

ನಸುಕಿನಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರು ಅರ್ಚಕರ ಮುಖೇನ ತಿಲಹೋಮಾದಿ ಕಾರ್ಯ ನೆರವೇರಿಸಿ ಪಿಂಡ ಪ್ರದಾನಗೈದರು. ಬಳಿಕ ಸಂಗಮ ಸ್ಥಳದಲ್ಲಿ ತೀರ್ಥಸ್ನಾನ ಮಾಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಮುಂಜಾನೆಯೇ ದೇವಳಕ್ಕೆ ಆಗಮಿಸಿ ಪಿಂಡ ಪ್ರದಾನ ಕಾರ್ಯದಲ್ಲಿ ಭಾಗಿಯಾದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್ ನೇತೃತ್ವದ ಸಮಿತಿ ಸದಸ್ಯರು, ದೇವಳದ ಸಿಬ್ಬಂದಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net