ಪಿಳ್ಳಪ್ಪಸ್ವಾಮಿ ಆರಾಧನಾ ಮಹೋತ್ಸವ ಸಂಪನ್ನ

ank
Published on

ನೇಕಲ್​: ಮಾನವ ಜನ್ಮ ಅತ್ಯಂತ ಪವಿತ್ರವಾಗಿದ್ದು, ತತ್ವ ಸಿದ್ಧಾಂತವುಳ್ಳಜೀವನ ನಡೆಸಬೇಕು ಎಂಬುದು ಪಿಳ್ಳಪ್ಪ ಸ್ವಾಮಿಗಳ ಆಶಯ. ಈ ನಿಟ್ಟಿನಲ್ಲಿ ಅವರ ವಿಚಾರಧಾರೆಗಳನ್ನು ಪ್ರಚಾರ ಪಡಿಸಬೇಕು. ಭಾರತ ಸಾಧು ಸಂತರ ನಾಡಾಗಿದ್ದು, ಸಂಸತಿ ಪರಂಪರೆ ಉಳಿಸಬೇಕು ಎಂದು ಹೊಸೂರು ತಾತಯ್ಯ ಮಠದ ವೆಂಕಟೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಮಾಯಸಂದ್ರದಲ್ಲಿ ಶುಕ್ರವಾರ ಶ್ರೀ ಸಚ್ಚಿದಾನಂದ ಅವಧೂತ ಪಿಳ್ಳಪ್ಪಸ್ವಾಮಿ ಅವರ 62ನೇ ಆರಾಧನಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಗ್ರಾಮ ದೇವತೆಗಳಾದ ಆದಿಶಕ್ತಿ ಯಲ್ಲಮ್ಮದೇವಿ, ಪಿಳ್ಳಪ್ಪ ಸ್ವಾಮಿ, ದ್ರೌಪದಮ್ಮ ದೇವಿ, ಮುತ್ಯಾಲಮ್ಮ ದೇವಿಯರ ಪಲ್ಲಕ್ಕಿ ಉತ್ಸವ, ಕರಗ ಮಹೋತ್ಸವದಲ್ಲಿ ಮಾತನಾಡಿದರು.

ಪಿಳ್ಳಪ್ಪಸ್ವಾಮಿ ಆಶ್ರಮದ ಅಧ್ಯಕ್ಷ ಎಂ.ವಿ.ಮಂಜುನಾಥ್​ ಮಾತನಾಡಿ, ಅವಧೂತ ಪಿಳ್ಳಪ್ಪ ಸ್ವಾಮಿಗಳು ಹಲವು ಪವಾಡಗಳ ಮಾಡುವ ಮೂಲಕ ಈ ಭಾಗದಲ್ಲಿ ಭಕ್ತರನ್ನು ಹೊಂದಿದ್ದರು. ದಶಕಗಳು ಕಳೆದರೂ ಅವರ ಪ್ರಭಾವ ಭಕ್ತರ ಮೇಲಿದೆ ಎಂದರು. ಮಾಯಸಂದ್ರದ ಪಿಳ್ಳಪ್ಪ ಸ್ವಾಮಿ ಭಜನೆ ಮನೆಯಿಂದ ಕೋಲಾಟ ಪ್ರದರ್ಶನ ನಡೆಯಿತು.

ಶಾಸಕ ಬಿ.ಶಿವಣ್ಣ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮಾಯಸಂದ್ರ ಗ್ರಾಪಂ ಅಧ್ಯಕ್ಷ ನಾರಾಯಣಪ್ಪ, ರತ್ನಕುಮಾರ ಸ್ವಾಮೀಜಿ, ನರಸಿಂಹಮೂರ್ತಿ, ರಾಮಕೃಷ್ಣ ಸ್ವಾಮೀಜಿ, ಬಾಬುರೆಡ್ಡಿ, ಗಿರಿಜಾ ಮಾತಾಜಿ, ರಾಮಕೋಟೀಶ್ವರ ಸ್ವಾಮೀಜಿ, ರಾಜಮ್ಮ, ರಾಜಣ್ಣ, ಸಚ್ಚಿದಾನಂದ ಸೀನಪ್ಪ, ಕೃಷ್ಣಪ್ಪ, ಭೈರಪ್ಪ, ಮುಖಂಡರಾದ ಮುನಿಯಪ್ಪ, ರಾಮಸ್ವಾಮಿ, ನಾಗರಾಜು, ಸಂಪಂಗಿ, ಗೋವಿಂದಪ್ಪ ಇದ್ದರು.

ಆನೇಕಲ್​ ಮಹೋತ್ಸವ&4&4

ಆನೇಕಲ್​ ತಾಲೂಕಿನ ಮಾಯಸಂದ್ರದಲ್ಲಿ ಶ್ರೀ ಸಚ್ಚಿದಾನಂದ ಅವಧೂತ ಪಿಳ್ಳಪ್ಪಸ್ವಾಮಿ ಅವರ ಆರಾಧನಾ ಮಹೋತ್ಸವದಲ್ಲಿ ತಾಲೂಕಿನ ಹಲವು ಸಾಧು ಸಂತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net