ಮಂಜೇಶ್ವರದಲ್ಲಿ 'ಶ್ರೀ ದುರ್ಗಾ ಚೌಕಿದ ಪಿಲಿನಲಿಕೆ' ಲಾಂಛನ ಅನಾವರಣ

IMG-20230825-WA0217
Published on

ಮಂಜೇಶ್ವರ: ಮಂಜೇಶ್ವರ ಚೌಕಿಯಲ್ಲಿ ಮುಂದಿನ ಅಕ್ಟೋಬರ್ 22 ರಂದು ನಡೆಯಲಿರುವ ' ಶ್ರೀ ದುರ್ಗಾ ಚೌಕಿದ ಪಿಲಿನಲಿಕೆ' ಕೂಟದ ಲಾಂಛನ ( ಲೋಗೊ) ಸ್ಥಳೀಯ ಅಂಬೇಡ್ಕರ್ ನಗರ ಉದ್ಯಾವರ ಗುತ್ತುನಲ್ಲಿರುವ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ಜರುಗಿತು.
ಉದ್ಯಾವರ ಮಂಜಿಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ ಲಾಂಛನ ಅನಾವರಣ ಗೊಳಿಸಿ ಶುಭ ಹಾರೈಸಿದರು.
ಧಾರ್ಮಿಕ ಮುಖಂಡ ಹರೀಶ್ ಶೆಟ್ಟಿ ಮಾಡ, ಮಂಜೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಯಾದವ ಬಡಾಜೆ, ಕನಿಲ ಶ್ರೀ ಭಗವತಿ ಕ್ಷೇತ್ರದ ಗುರಿಕಾರ ಪ್ರಸಾದ್ ಗುರಿಕಾರ, ಶ್ರೀ ಕೋಮರಾಯ ವ್ಯಾಘ್ರ ಚಾಮುಂಡೇಶ್ವರಿ ಕ್ಷೇತ್ರದ ಹಿರಿಯರಾದ ಸುಕುಮಾರ, ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಮುಖ್ಯ ಅರ್ಚಕ ಐತಪ್ಪ ಜಿ, ಅಧ್ಯಕ್ಷ ಉಮೇಶ್, ಪಿಲಿನಲಿಕೆ ತಂಡದ ಅಧ್ಯಕ್ಷ ಹರೀಶ್ ಚೌಕಿ, ದುರ್ಗಾ ಹುಲಿಯ ಅಧ್ಯಕ್ಷ ನಿತಿನ್ ಚೌಕಿ ಮುಂತಾದವರು ಉಪಸ್ಥಿತರಿದ್ದರು.

(((
ಕಾಸರಗೋಡು ಜಿಲ್ಲೆಯಲ್ಲೇ ಪ್ರಥಮ

ಮಂಜೇಶ್ವರ ಚೌಕಿಯಲ್ಲಿ ನಡೆಯಲಿರುವ ' ಶ್ರೀ ದುರ್ಗಾ ಚೌಕಿದ ಪಿಲಿನಲಿಕೆ' ಕಾಸರಗೋಡು ಜಿಲ್ಲಾ ಮಟ್ಡದ ಪ್ರಥಮ ಪಿಲಿನಲಿಕೆ ಸ್ಪರ್ಧೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನವಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net