

ಪುತ್ತೂರು: ನವರಾತ್ರಿಯ ದುರ್ಗೆಯ ವಾಹನಕ್ಕೆ ಪೂರಕವಾಗಿ ತುಳುನಾಡಿನ ಜನಪದ ಕ್ರೀಡೆಯನ್ನು ಸಂಸ್ಕೃತಿಯ ಮೂಲಕ ತೋರಿಸಿಕೊಟ್ಟ ವೇದಿಕೆ ವಿಜಯ ಸಾಮ್ರಾಟ್ ತಂಡಕ್ಕೆ ಸಲ್ಲುತ್ತದೆ. ಪಿಲಿಗೊಬ್ಬು 1 ಯಶಸ್ವಿಯನ್ನು ಮೀರಿಸುವ ಮೂಲಕ 2ನೇ ಸೀಸನ್ ಎಲ್ಲರಿಗೂ ಮಾದರಿಯಾಗಬೇಕು. ಪುತ್ತೂರಿನಲ್ಲಿ ಇಂತಹ ವ್ಯವಸ್ಥೆ ಮಾಡಿದ ಸಹಜ್ ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉದ್ಯಮಿ ಉಜ್ವಲ್ ಪ್ರಭು ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ವಿಜಯ ಸಾಮ್ರಾಟ್ ಆಶ್ರಯದಲ್ಲಿ ಪುತ್ತೂರು ಪಿಲಿಗೊಬ್ಬು ಸಮಿತಿ ವತಿಯಿಂದ ಜನರ ಸಂಭ್ರಮಕ್ಕಾಗಿ ಪುತ್ತೂರು ಫುಡ್ ಫೆಸ್ಟ್ ಸೀಸನ್-2 ಉದ್ಘಾಟಿಸಿ ಮಾತನಾಡಿದರು.
50ಕ್ಕೂ ಅಽಕ ಆಹಾರ ಮಳಿಗೆಗಳಿಗೆ ತೆರಳಿ ಸ್ಟಾಲ್ ಮಾಲಕರಿಗೆ ಶಲ್ಯ ತೊಡಿಸಲಾಯಿತು. ವಿಜಯ ಸಾಮ್ರಾಟ್ ಚಾರಿಟೆಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ ಅಧ್ಯಕ್ಷತೆ ವಹಿಸಿದ್ದರು. ಪಾಪ್ಯುಲರ್ ನ್ಯೂಟ್ರಿಷಿಯಸ್‌ನ ನರೇಂದ್ರ ಕಾಮತ್, ಪುತ್ತರ‍್ದ ಪಿಲಿಗೊಬ್ಬು ಸಮಿತಿ ಸಂಚಾಲಕ ನಾಗರಾಜ ಭಟ್, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್ ಉಪಸ್ಥಿತರಿದ್ದರು.
ಪುತ್ತೂರುದ ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶರತ್ ಆಳ್ವ ಕೂರೆಲು ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.