

ಬೆಳ್ತಂಗಡಿ: ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ ನಡೆಯಿತು. ರಘುರಾಮ್ ಭಟ್ ಮಠ ಅವರ ಮನೆಯಿಂದ ದೈವದ ಭಂಡಾರದ ಮೆರವಣಿಗೆ ವಿಶ್ವ ಹಿಂದು ಪರಿಷತ್, ಮದ್ದಡ್ಕ ಬಜರಂಗದಳದ ಸುಡು ಮದ್ದಿನ ಪ್ರದರ್ಶನದೊಂದಿಗೆ ದೈವಸ್ಥಾನಕ್ಕೆ ಬಂದು ಪರ್ವ ಸೇವೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ದೈವದ ನೇಮೋತ್ಸವ ನಡೆಯಿತು. ಆನುವಂಶಿಕ ಆಡಳಿತ ಮೊಕ್ತೇಸರ ಮೋಹನ್ ಕೆರ್ಮುಣ್ಣಾಯ ಮೈರಾರು ಮನೆ, ಶ್ರೀನಿವಾಸ ಅಮ್ಮುಣ್ಣಾಯ ಅಸ್ರಣ್ಣ ಮೂಡುಮನೆ, ರಘುರಾಮ್ ಭಟ್ ಆಸ್ರಣ್ಣ ಮಠ ಮನೆ, ಭಕ್ತರು ಉಪಸ್ಥಿತರಿದ್ದರು. ಅನಂತ ಎಸ್ ಇರ್ವತ್ರಾಯ ತಂಗೋಯಿ ರಚನೆಯ ಬ್ರಹ್ಮ ದಂಡ ತುಳು ನಾಟಕ ಪ್ರದರ್ಶನಗೊಂಡಿತು.