ತುಳು ಸಂಸ್ಕೃತಿಯ ಉಳಿವಿಗೆ ಟೀಮ್ ಪಿಲಿ ಅಜನೆ ಕೊಡುಗೆ : ಸಂಸದ ಕ್ಯಾ.ಬೃಜೇಶ್ ಚೌಟ ಶ್ಲಾಘನೆ

mng-4oct-pili ajane
Published on


ಮಂಗಳೂರು : ದಸರಾ ಸಂಭ್ರಮಾಚರಣೆಯ ಅಂಗವಾಗಿ ನಗರದ ಕೊಡಿಯಾಲ್‌ಬೈಲ್ ಎಂ.ಜಿ.ರೋಡ್ ಬಳಿಕ ನಡೆದ 4ನೇ ವರ್ಷದ ಪಿಲಿ ಅಜನೆ ಕಾರ್ಯಕ್ರಮವನ್ನು ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮಿತ್ರ. ಎಸ್.ರಾವ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಸಂಸದ ಕ್ಯಾ.ಬೃಜೇಶ್ ಚೌಟ ಮಾತನಾಡಿ ‘ ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದ ನಮ್ಮ ನಾಡಿನ ಸಾಂಪ್ರದಾಯಿಕ ಕಲೆಗಳು ಉಳಿಯುತ್ತದೆ. ಟೀಮ್ ಪಿಲಿ ಅಜನೆ ತುಳು ಸಂಸ್ಕೃತಿಯ ಉಳಿವಿಗೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದರು.
ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಶುಭ ಹಾರೈಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಟೀಮ್ ಪಿಲಿ ಅಜನೆ ಗೌರವಾಧ್ಯಕ್ಷ ಕೇಶವ ಬಂಗೇರ, ರಕ್ಷಿತ್ ಶೆಟ್ಟಿ, ಕಿಶೋರ್ ಸಿಂಗ್ , ಮನೋಜ್ ಕುಮಾರ್, ರೂಪಾ.ಡಿ. ಬಂಗೇರ , ಶರಣ್ ಶೆಟ್ಟಿ , ಪ್ರೇಮ್ ಸಾಲ್ಯಾನ್ ಬಿಜೈ, ರಕ್ಷಿತ್. ಆರ್.ಪೂಜಾರಿ, ಯಶ್‌ಪಾಲ್ ಸಾಲ್ಯಾನ್ , ಸಂಘಟಕರಾದ ಪ್ರಮೋದ್ ಕರ್ಕೇರ, ರವಿರಾಜ್ ಚೌಟ ಉಪಸ್ಥಿತರಿದ್ದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧಕಿ, ಭರತನಾಟ್ಯ ಕಲಾವಿದೆ ರೆಮೊನಾ ಇವೆಟ್ ಪಿರೆರಾ ವರನ್ನು ಸನ್ಮಾನಿಸಲಾಯಿತು. ಶ್ರೀ ಧರ್ಮಶಾಸ್ತ ಸನ್ನಿಧಿ ಭಜನಾ ತಂಡ ಕೂಳೂರು ಇವರಿಂದ ಕುಣಿತ ಭಜನೆ, ಮೂಕಾಂಬಿಕಾ ಚೆಂಡೆ ,ಶ್ರೀಜಿತ್ ಸರಳಾಯ ಮತ್ತು ಶ್ರೇಷ್ಠ ಕದ್ರಿ ಇವರಿಂದ ವಿಭಿನ್ನ ಶೈಲಿಯ ಚೆಂಡೆ-ವಯಲಿನ್ -ಫ್ಯೂಶನ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ಜಗದಾಂಭ ಹುಲಿ ವೇಷ ತಂಡದಿಂದ ಹುಲಿ ಕುಣಿತ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net