ಗುದ್ದಲೀಸ್ವಾಮಿ ಮಠದ ಯಾತ್ರಾ ಮಹೋತ್ಸವ: ವೈಭವದ ಕಡುಬಿನ ಕಾಳಗ

Guddaliswami Kadubina Kalaga
Published on

ಗುತ್ತಲ: ಸಮೀಪದ ಹೊಸರಿತ್ತಿಯ ಗುದ್ದಲೀಸ್ವಾಮಿ ಮಠದ 125ನೇ ಯಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಡುಬಿನ ಕಾಳಗ ವೈಭವದಿಂದ ಜರುಗಿತು.

ಗುದ್ದಲೀಸ್ವಾಮಿ ಮಠದ 5ನೇ ಪೀಠಾಧಿಪತಿ ಗುದ್ದಲೀ ಶಿವಯೋಗೀಶ್ವರ ಸ್ವಾಮೀಜಿ ಕಡುಬಿನ ಕಾಳಗದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಭಕ್ತರಲ್ಲಿ ಹರ್ಷ ಹಾಗೂ ಧನ್ಯತಾ ಭಾವ ಕಂಡು ಬಂತು. ರೈತರಿಗೆ ಮುಂದಿನ ದುಡಿಮೆಗೆ ಉತ್ಸಾಹ ತುಂಬಲೆಂಬಂತೆ ಈ ಕಾಳಗದಲ್ಲಿ ಸ್ವಾಮೀಜಿಯವರ ಕೈಯಿಂದ ಪ್ರಸಾದ ರೂಪದಲ್ಲಿ ಸಿಗುವ ಕಬ್ಬಿನ ತುಂಡುಗಳು, ಬೆಲ್ಲದ ಚೂರುಗಳನ್ನು ಪಡೆದ ಭಕ್ತರ ಆನಂದಕ್ಕೆ ಪಾರವೇ ಇರಲಿಲ್ಲ. ನೆರೆಯ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಲಕ್ಕುಂಡಿಯ ಸಿದ್ದಲಿಂಗ ಸ್ವಾಮಿಜಿ, ಹೂವಿನ ಶಿಗ್ಲಿ ಚನ್ನವೀರ ಸ್ವಾಮಿಜಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net